ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೇಮಕಾತಿ.
ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿರುವ ನವಕಲ್ಯಾಣ ಕರ್ನಾಟಕ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ತನ್ನ ಪ್ರಧಾನ ಕಚೇರಿ ಹಾಗೂ ಶಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ (Deputy CEO) ಹಾಗೂ ಗ್ರಾಹಕ ಸಂಪರ್ಕ ನಿರ್ವಾಹಕ (Customer Relation Executive) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 1. ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ (Deputy CEO): 1 ಹುದ್ದೆ ಮಾಸಿಕ ವೇತನ ಶ್ರೇಣಿ: ₹35,000 ರಿಂದ ₹51,000 ಗ್ರಾಹಕ ಸಂಪರ್ಕ ನಿರ್ವಾಹಕ (Customer Relation Executive - CRE): 1 ಹುದ್ದೆ ಮಾಸಿಕ ವೇತನ ಶ್ರೇಣಿ: ₹13,500 ರಿಂದ ₹23,300 2. ಅಗತ್ಯ ಶೈಕ್ಷಣಿಕ ವಿದ್ಯಾರ್ಹತೆ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ (Deputy CEO): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯಲ್ಲಿ (Post Graduation) ಸರಾಸರಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಗ್ರಾಹಕ ಸಂಪರ್ಕ ನಿರ್ವಾಹಕ (CRE): ಯಾವುದೇ ಪದವಿಯಲ್ಲಿ (Graduation) ಸರಾಸರಿ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. 3. ಅರ್ಜಿ ಸಲ್ಲಿಸುವ ವಿಧಾನ & ಸಂಪರ್ಕ ವಿವರಗಳು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ವ-ಹಸ್ತಾ...