ರೈಲ್ವೆ ಇಲಾಖೆಯಲ್ಲಿ 1,688 ಎನ್‌ಟಿಪಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ.

 

RRB NTPC UG ನೇಮಕಾತಿ 2026: ಪ್ರಮುಖ ವಿವರಗಳು

ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವವರಿಗೆ ಭಾರತೀಯ ರೈಲ್ವೆ ಇಲಾಖೆಯು (ಆರ್‌ಆರ್‌ಬಿ) ಸಿಹಿ ಸುದ್ದಿ ನೀಡಿದ್ದು, ಎನ್‌ಟಿಪಿಸಿ ಅಂಡರ್‌ಗ್ರಾಜುಯೇಟ್ (NTPC UG) ಹಂತದಲ್ಲಿ ಒಟ್ಟು 1,688 ಹುದ್ದೆಗಳ ಭರ್ತಿಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದೆ.  

ಭಾರತೀಯ ರೈಲ್ವೆಯಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವ 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಮಹತ್ವದ ಅವಕಾಶವೊಂದು ಲಭ್ಯವಾಗಿದೆ. Railway Recruitment Board (RRB) ವತಿಯಿಂದ NTPC Undergraduate (UG) Recruitment 2026 ಅಡಿಯಲ್ಲಿ ಒಟ್ಟು 1,688 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ನೇಮಕಾತಿಗೆ ಸಂಬಂಧಿಸಿದಂತೆ CEN 07/2026 ಅಧಿಸೂಚನೆ ಪ್ರಕ್ರಿಯೆ ಮುಂದುವರಿದಿದೆ. ಒಟ್ಟು 1,688 ಹುದ್ದೆಗಳು
RRB NTPC UG ನೇಮಕಾತಿಯಲ್ಲಿ ನಾಲ್ಕು ಪ್ರಮುಖ ಹುದ್ದೆಗಳನ್ನು ಒಳಗೊಂಡಿದ್ದು, ಹುದ್ದೆಗಳ ವಿವರ ಹೀಗಿದೆ: 
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ (CCTC): 700 ಹುದ್ದೆಗಳು  
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 600 ಹುದ್ದೆಗಳು  
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್: 200 ಹುದ್ದೆಗಳು  
ರೈಲು ಗುಮಾಸ್ತ (Train Clerk): 188 ಹುದ್ದೆಗಳು
ಅರ್ಹತೆ ಮತ್ತು ವಯೋಮಿತಿ
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ (PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.  
ತಾಂತ್ರಿಕ ಕೌಶಲ: ಕೆಲವು ಹುದ್ದೆಗಳಿಗೆ ಹಿಂದಿ ಅಥವಾ ಇಂಗ್ಲಿಷ್ ಟೈಪಿಂಗ್ ಜ್ಞಾನ ಅಗತ್ಯವಿರುತ್ತದೆ.  
ವಯೋಮಿತಿ: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 33 ವರ್ಷ. (ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಾವಳಿ ಪ್ರಕಾರ ವಯೋಸಡಲಿಕೆ ಇರುತ್ತದೆ).
ಅರ್ಜಿ ಶುಲ್ಕ
ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ: ₹500  
ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಾಜಿ ಸೈನಿಕರು, ಮಹಿಳೆಯರಿಗೆ: ₹250  
 ಆಯ್ಕೆ ಪ್ರಕ್ರಿಯೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ-1 (CBT 1)  
ಕಂಪ್ಯೂಟರ್ ಆಧಾರಿತ ಪರೀಕ್ಷೆ-2 (CBT 2)  
ಟೈಪಿಂಗ್ ಕೌಶಲ ಪರೀಕ್ಷೆ (ಅನ್ವಯಿಸುವ ಹುದ್ದೆಗಳಿಗೆ ಮಾತ್ರ)  
ದಾಖಲೆಗಳ ಪರಿಶೀಲನೆ (Document Verification)  
ವೈದ್ಯಕೀಯ ಪರೀಕ್ಷೆ (Medical Examination)
ಪ್ರಮುಖ ದಿನಾಂಕಗಳು & ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15 ಅಕ್ಟೋಬರ್ 2026  
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ನವೆಂಬರ್ 2026  
ಅರ್ಜಿ ಸಲ್ಲಿಸುವ ಜಾಲತಾಣ: ಅಧಿಕೃತ ಪೋರ್ಟಲ್ rrbapply.gov.in ಮೂಲಕ ಆನ್‌ಲೈನ್‌ನಲ್ಲಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!