ಶಿಕ್ಷಕರ ಉದ್ಯೋಗ ಮತ್ತು ಬಡ್ತಿಗೆ TET ಕಡ್ಡಾಯ; ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು! ಶಿಕ್ಷಕರಲ್ಲಿ ಹೆಚ್ಚಿದ ಆತಂಕ.
ಶಿಕ್ಷಕರ ಉದ್ಯೋಗ ಮತ್ತು ಬಡ್ತಿಗೆ (Promotion) TET (ಶಿಕ್ಷಕರ ಅರ್ಹತಾ ಪರೀಕ್ಷೆ) ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಇದು 20 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಉದ್ಯೋಗದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಈಗ ಅತ್ಯಂತ ಕಠಿಣ ಹಾಗೂ ಮಹತ್ವದ ತೀರ್ಪೊಂದನ್ನು ನೀಡಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಉದ್ಯೋಗ ಭದ್ರತೆ ಹಾಗೂ ಮುಂದಿನ2028 ರ ಒಳಗಾಗಿ ಉತ್ತೀರ್ಣರಾಗಬೇಕು: ಸಂಪೂರ್ಣವಾಗಿ ಪ್ರಕ್ರಿಯೆ ಮುಗಿಸಲು ಹಾಗೂ ಟಿಇಟಿ ಪರೀಕ್ಷೆಯನ್ನು ಬರೆದು ಪಾಸ್ ಮಾಡಲು 2028 ರ ಒಳಗೆ ಅಂತಿಮ ಅವಕಾಶ ಇರಲಿದೆ. ಬಡ್ತಿಗೆ (Promotion) ಇನ್ಮುಂದೆ ಶಿಕ್ಷಕರ ಅರ್ಹತಾ ಪರೀಕ್ಷೆ (Teacher Eligibility Test - TET) ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಉನ್ನತ ನ್ಯಾಯಾಲಯದ ಈ ಅದೇಶದಿಂದಾಗಿ ದೇಶಾದ್ಯಂತ ಇರುವ ಲಕ್ಷಾಂತರ ಶಿಕ್ಷಕರಲ್ಲಿ ಒಮ್ಮೆಗೇ ಕಳವಳ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ತೀರ್ಪಿನ ಹಿನ್ನೆಲೆ ಏನು? ಯಾರಿಗೆಲ್ಲಾ ಇದು ಅನ್ವಯಿಸುತ್ತದೆ? ಮತ್ತು ನ್ಯಾಯಾಲಯ ನೀಡಿರುವ ಡೆಡ್‌ಲೈನ್ ಏನು ಎಂಬ ಸಂಪೂರ್ಣ ವಿವರ ಇಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲೇನಿದೆ? 1. TET ಕಡ್ಡಾಯ: ಸರ್ಕಾರಿ & ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ...