ಶಿಕ್ಷಕರ ಉದ್ಯೋಗ ಮತ್ತು ಬಡ್ತಿಗೆ TET ಕಡ್ಡಾಯ; ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು! ಶಿಕ್ಷಕರಲ್ಲಿ ಹೆಚ್ಚಿದ ಆತಂಕ.
ಶಿಕ್ಷಕರ ಉದ್ಯೋಗ ಮತ್ತು ಬಡ್ತಿಗೆ (Promotion) TET (ಶಿಕ್ಷಕರ ಅರ್ಹತಾ ಪರೀಕ್ಷೆ) ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಇದು 20 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಉದ್ಯೋಗದ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಈಗ ಅತ್ಯಂತ ಕಠಿಣ ಹಾಗೂ ಮಹತ್ವದ ತೀರ್ಪೊಂದನ್ನು ನೀಡಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಉದ್ಯೋಗ ಭದ್ರತೆ ಹಾಗೂ ಮುಂದಿನ2028 ರ ಒಳಗಾಗಿ ಉತ್ತೀರ್ಣರಾಗಬೇಕು: ಸಂಪೂರ್ಣವಾಗಿ ಪ್ರಕ್ರಿಯೆ ಮುಗಿಸಲು ಹಾಗೂ ಟಿಇಟಿ ಪರೀಕ್ಷೆಯನ್ನು ಬರೆದು ಪಾಸ್ ಮಾಡಲು 2028 ರ ಒಳಗೆ ಅಂತಿಮ ಅವಕಾಶ ಇರಲಿದೆ. ಬಡ್ತಿಗೆ (Promotion) ಇನ್ಮುಂದೆ ಶಿಕ್ಷಕರ ಅರ್ಹತಾ ಪರೀಕ್ಷೆ (Teacher Eligibility Test - TET) ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಉನ್ನತ ನ್ಯಾಯಾಲಯದ ಈ ಅದೇಶದಿಂದಾಗಿ ದೇಶಾದ್ಯಂತ ಇರುವ ಲಕ್ಷಾಂತರ ಶಿಕ್ಷಕರಲ್ಲಿ ಒಮ್ಮೆಗೇ ಕಳವಳ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ತೀರ್ಪಿನ ಹಿನ್ನೆಲೆ ಏನು? ಯಾರಿಗೆಲ್ಲಾ ಇದು ಅನ್ವಯಿಸುತ್ತದೆ? ಮತ್ತು ನ್ಯಾಯಾಲಯ ನೀಡಿರುವ ಡೆಡ್‌ಲೈನ್ ಏನು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸುಪ್ರೀಂ ಕೋರ್ಟ್ ತೀರ್ಪಿನಲ್ಲೇನಿದೆ?
1. TET ಕಡ್ಡಾಯ: ಸರ್ಕಾರಿ & ಅನುದಾನಿತ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿ & ಬಡ್ತಿ ಎರಡಕ್ಕೂ Teacher Eligibility Test (TET) ಪಾಸ್ ಆಗಿರಲೇಬೇಕು.
2. ಸೇವೆಯಲ್ಲಿರೋ ಟೀಚರ್ಸ್‌ಗೂ ಅನ್ವಯ: ಈಗಾಗಲೇ ಕೆಲಸ ಮಾಡ್ತಿರೋ ಶಿಕ್ಷಕರು TET ಪಾಸ್ ಆಗಿಲ್ಲ ಅಂದ್ರೆ 2 ವರ್ಷದೊಳಗೆ ಪಾಸ್ ಮಾಡಬೇಕು.
3. ಡೆಡ್‌ಲೈನ್: ಕೋರ್ಟ್ ಹೊಸ ಗಡುವು ಫಿಕ್ಸ್ ಮಾಡಿದೆ – 31 ಡಿಸೆಂಬರ್ 2026 ರೊಳಗೆ TET ಕ್ಲಿಯರ್ ಮಾಡಬೇಕು.
4. ಫೇಲ್ ಆದ್ರೆ?: ಡೆಡ್‌ಲೈನ್ ಒಳಗೆ ಪಾಸ್ ಆಗಿಲ್ಲ ಅಂದ್ರೆ ಸೇವೆಯಿಂದ ತೆಗೆದುಹಾಕಬಹುದು /ಬಡ್ತಿ ಸಿಗಲ್ಲ.
ಶಿಕ್ಷಕ ವೃತ್ತಿಯಲ್ಲೇ ಮುಂದುವರಿಯಲು ಹಾಗೂ ಇಲಾಖೆಯಲ್ಲಿ ಉನ್ನತ ಹುದ್ದೆಗಳಿಗೆ ಬಡ್ತಿ ಪಡೆಯಲು ಟಿಇಟಿ (TET) ಪರೀಕ್ಷೆ ಪಾಸ್ ಆಗಿರುವುದು ಇನ್ಮುಂದೆ ಕಡ್ಡಾಯ ಪ್ರಕ್ರಿಯೆಯಾಗಲಿದೆ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರ ಅರ್ಹತೆ ಅತ್ಯಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ತೀರ್ಪಿನಿಂದಾಗಿ ಇಡೀ ದೇಶಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು ಶಿಕ್ಷಕರ ಉದ್ಯೋಗದ ಭವಿಷ್ಯ ಮತ್ತು ಅವರ ವೃತ್ತಿ ಜೀವನದ ಮೇಲೆ ಭಾರಿ ದೊಡ್ಡ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆಗಳೂ ಇವೆ.
ಶಿಕ್ಷಕರಿಗೆ ಸಿಕ್ಕಿರುವ ಕೊನೆಯ ಗಡುವು (TET Exam Deadlines):
ಈಗಾಗಲೇ ಸೇವೆಯಲ್ಲಿದ್ದು ಟಿಇಟಿ (TET) ಉತ್ತೀರ್ಣರಾಗದ ಶಿಕ್ಷಕರಿಗೆ ತಕ್ಷಣವೇ ಕೆಲಸದಿಂದ ತೆಗೆಯದೆ, ಪರೀಕ್ಷೆ ಪಾಸ್ ಮಾಡಲು ಸುಪ್ರೀಂ ಕೋರ್ಟ್ ನಿರ್ದಿಷ್ಟ ಕಾಲಾವಕಾಶವನ್ನು ವಿಸ್ತರಿಸಿದೆ:
ಆಗಸ್ಟ್ 31 ರವರೆಗೆ ಗಡುವು: ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದವರಿಗೆ ಮೊದಲ ಹಂತದಲ್ಲಿ ಆಗಸ್ಟ್ 31 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ.
2. ಯಾಕೆ ಈ ತೀರ್ಪು?
RTE Act 2009: ಉಚಿತ & ಕಡ್ಡಾಯ ಶಿಕ್ಷಣ ಕಾಯ್ದೆ ಪ್ರಕಾರ ಶಿಕ್ಷಕರ ಗುಣಮಟ್ಟ ಕಾಪಾಡಲು TET ಅಗತ್ಯ.
NCTE 2: National Council for Teacher Education 20110 TET ಕಡ್ಡಾಯ ಮಾಡಿತ್ತು. ಆದ್ರೆ ಹಲವು ರಾಜ್ಯಗಳು ಪಾಲಿಸಿರಲಿಲ್ಲ
ಕೋರ್ಟ್ ವಾದ: "ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡೋದು ಮೂಲಭೂತ ಹಕ್ಕು. TET ಇಲ್ಲದ ಟೀಚರ್ = ಕಾನೂನು ಉಲ್ಲಂಘನೆ'
3. ಯೂನಿಯನ್ ಗಳ ಆಕ್ಷೇಪ ಏನು?
1. ಸರ್ಕಾರ ಮಧ್ಯಪ್ರವೇಶ ಮಾಡಲಿ: 20-25 ವರ್ಷ ಸೇವೆ ಮಾಡಿರೋ ಟೀಚರ್‌ಗಳಿಗೆ ಈಗ TET ಕಷ್ಟ ಅಂತ ಶಿಕ್ಷಕ ಸಂಘಗಳು ವಾದ
2. ವಯೋಮಿತಿ ಸಡಿಲಿಕೆ: 50+ ವಯಸ್ಸಿನ
ಟೀಚರ್‌ಗಳಿಗೆ TET ನಿಂದ ವಿನಾಯಿತಿ ಕೊಡಿ ಅಂತ ಡಿಮ್ಯಾಂಡ್
3. ಟ್ರೈನಿಂಗ್ ಕೊಡಿ: ಡೆಡ್‌ಲೈನ್‌ಗಿಂತ ಮುಂಚೆ ಸರ್ಕಾರ ಉಚಿತ TET ಕೋಚಿಂಗ್ ಕೊಡಬೇಕು ಅಂತ ಒತ್ತಾಯ4. ಕರ್ನಾಟಕಕ್ಕೆ ಏನು ಪರಿಣಾಮ?
. ವಿಭಾಗ : ಹೊಸ ನೇಮಕಾತಿ
ಪರಿಣಾಮ: KARTET ಪಾಸ್ ಆಗಿದ್ದಾರೆ SDA, GPSTR ಅರ್ಜಿ ಹಾಕೋಕೆ ಆಗೋದಿಲ್ಲ.
. ಬಡ್ತಿ : ಪ್ರಾಥಮಿಕ / ಪ್ರೌಢಶಾಲೆ, HM ಬಡ್ತಿಗೆ KARTET ಕಡ್ಡಾಯ.
. ಸೇವೆಯಲ್ಲಿರೋರು : 2012 ಕ್ಕಿಂತ ಮೊದಲು ಸೇರಿದ - 40,000 ಟೀಚರ್ ಗಳು TET ಬರೆದಿಲ್ಲ,2026ರೊಳಗೆ ಪಾಸ್ ಆಗಬೇಕು.
. ಖಾಸಗಿ ಶಾಲೆ : ಶಾಲೆಗಳಿಗೆ ಅನ್ವಯ, ಪೂರ್ತಿ ಖಾಸಗಿ ಶಾಲೆಗೆ ಸದ್ಯಕ್ಕಿಲ್ಲ.
5 . ಮುಂದೇನು ?
. KARTET 2026 : ಕರ್ನಾಟಕದಲ್ಲಿ ಮುಂದಿನ TET ಪರೀಕ್ಷೆ ಅಕ್ಟೋಬರ್ 2026 ಅಂದಾಜು
. ಸಿಲಬಸ್ : ಮಕ್ಕಳ ಬೆಳವಣಿಗೆ, ಪೇಡಗಾಜಿ, ಭಾಷೆ - 1, ಭಾಷೆ - 2, ಗಣಿತ/EVS/ಸಮಾಜ
. ಪಾಸ್ ಮಾರ್ಕ್ : ಸಾಮಾನ್ಯ 60% SC/ST/OBC 50%
ಸಂಕ್ಷಿಪ್ತ : ಇನ್ನುಮುಂದೆ TET ಇಲ್ಲದೆ ಟೀಚರ್ ಜಾಬ್ ಇಲ್ಲ.ಬಡ್ತಿ ಇಲ್ಲ 2026 ಡಿಸೆಂಬರ್ ಲಾಸ್ಟ್ ಚಾನ್ಸ್

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ