ಸಿಬ್ಬಂದಿ ಆಯ್ಕೆ ಆಯೋಗದ SSC ಜೂನಿಯರ್ ಇಂಜಿನಿಯರಿಂಗ್ 1,748 ಹುದ್ದೆಗಳಿಗೆ ಅರ್ಜಿ ಆಹ್ವಾನ. ಹುದ್ದೆಗಳ ನೇಮಕಾತಿ ವಿವರಗಳು ಕೆಳಗಿನಂತಿವೆ.

 

ಸಿಬ್ಬಂದಿ ಆಯ್ಕೆ ಆಯೋಗವು Staff selection commission 1,748 ಜೂನಿಯರ್ ಎನ್ ಜೆನ್ನಿ ಎಂಜಿನಿಯರ್ ಹುದ್ದೆಗಳ ಬರ್ತಿಗೆ ಆನ್ಲೈನ್ ಮೂಲಕ ಅರ್ಜಿ ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು SSC ಅಧಿಕೃತ ವೆಬ್ ಸೈಟ್  ssc.gov.in ಮೂಲಕ ಅರ್ಜಿ ಸಲ್ಲಿಸಬಹುದು. 

ಸೆಪ್ಟಂಬರ್ 2 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 22ಕ್ಕೆ ಕೊನೆಗೊಳ್ಳುತ್ತದೆ. ಸೆಪ್ಟಂಬರ್ 23 ಶುಲ್ಕ ಪಾವತಿಸಲು ಕೊನೆಯ ದಿನಾಂಕ. ಸೆಪ್ಟಂಬರ್ 28ರಿಂದ 30ರವರೆಗೆ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿ ಮಾಡುವ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೆ ಮರು ಅರ್ಜಿ ಸಲ್ಲಿಸಲು ಎರಡು ಬಾರಿ ಅವಕಾಶ ನೀಡಲಾಗುತ್ತದೆ. 

SSC JE 2026: ಹುದ್ದೆಗಳ ವಿವರಗಳು ಮತ್ತು ಅರ್ಹತೆ 

ಈ ನೇಮಕಾತಿಯ ಗಡಿ ರಸ್ತೆಗಳ ಸಂಸ್ಥೆ ( BRO ), ಕೇಂದ್ರ ಜಲ ಆಯೋಗ, CWD,CPWD ಕೇಂದ್ರ ಲೋಕೋಪಯೋಗಿ ಇಲಾಖೆ, ಮಿಲಿಟರಿ ಎಂಜಿನಿಯರ್ ಸೇವೆಗಳು, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ, ದೂರಸಂಪರ್ಕ ಇಲಾಖೆ, ಮೀನುಗಾರಿಕೆ ಹಾಗೂ ಪಶು ಸಂಗೋಪನೆ ಸಚಿವಾಲಯ, ಹೈನುಗಾರಿಕೆ ಸಚಿವಾಲಯದ ಸಂಸ್ಥೆಗಳು, ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಮತ್ತು ಟೆಲಿಕಾಂ ವಿಭಾಗಗಳ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಒಳಗೊಂಡಿದೆ. 

. ವೇತನ ಶ್ರೇಣಿ : ₹35,400-₹1,12,400

ಹುದ್ದೆಗಳ ಅನುಗುಣವಾಗಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪೂರ್ಣಗೊಳಿಸಿರಬೇಕು. ಇನ್ನು ಕೆಲವು ಹುದ್ದೆಗಳಿಗೆ ಕೆಲಸದ ಅನುಭವವಿರಬೇಕು. 

ಉದಾಹರಣೆಗೆ, ಗಡಿ ರಸ್ತೆಗಳ ಸಂಸ್ಥೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಮೂರು ವರ್ಷಗಳ ಡಿಪ್ಲೋಮಾ ಜೊತೆಗೆ ಎರಡು ವರ್ಷಗಳ ಸೇವಾ ಅನುಭವ ಹೊಂದಿರಬೇಕು. ಅದೇ ರೀತಿ, ಎಲೆಕ್ಟ್ರಿಕಲ್, ಮೆಕಾನಿಕಲ್, ಮತ್ತು ಟೆಲಿಕಾಂ ಹುದ್ದೆಗಳಿಗೆ ಅರ್ಹತಾ ಅವಶ್ಯಕತೆಗಳು ಭಿನ್ನವಾಗಿರಬೇಕು. 

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರದಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ. 

ಐ ಎಂ ಡಿ ಯಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭೌತಶಾಸ್ತ್ರವನ್ನು ಒಂದು ವಿಷಯವಾಗಿಟ್ಟುಕೊಂಡು ವಿಜ್ಞಾನದಲ್ಲಿ ಪದವಿ ಅಥವಾ ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಅಪ್ಲಿಕೇಶನ್, ಎಲೆಕ್ಟ್ರಾನಿಕ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ಇನ್ಸ್ಟ್ರುಮೆಂಟೇಶನ್, ಮಾಹಿತಿ ತಂತ್ರಜ್ಞಾನ ಅಥವಾ ದೂರಸಂಪರ್ಕ ಎಂಜಿನಿಯರಿಂಗ್ ನಂತಹ ಕ್ಷೇತ್ರಗಳಲ್ಲಿ ಸಂಬಂಧಿತ ಪದವಿ ಪಡೆದಿರಬೇಕು.

ಓಬಿಸಿ ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ ₹100 ಆಗಿದೆ. 

ಮಹಿಳಾ ಅಭ್ಯರ್ತಿಗಳು ಮತ್ತು ಎಸ್ಸಿ, ಎಸ್ ಟಿ, ಪಿಡಬ್ಲ್ಯೂಡಿ ಮತ್ತು ಮಾಜಿ ಸೈನಿಕರ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. 

ಶೂರ್ಖವನ್ನು BHIM UPI, ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ಗಳ ಮೂಲಕ ಆನ್ಲೈನ್ ನಲ್ಲಿ ಮಾತ್ರ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು SSC ಯ ಅಧಿಕೃತ ವೆಬ್ ಸೈಟ್ ssc.gov.in ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!