10ನೇ, PUC ವಿದ್ಯಾರ್ಥಿಗಳಿಗೆ LIC ವಿದ್ಯಾರ್ಥಿವೇತನ: ಅರ್ಜಿ ಸಲ್ಲಿಕೆ ಪ್ರಾರಂಭ.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮುಂದುವರಿಸಲು ಸಹಾಯವಾಗುವಂತೆ LIC Golden Jubilee Scholarship ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. 10ನೇ ತರಗತಿ ಮತ್ತು PUC ನಂತರದ ಶಿಕ್ಷಣ ಮುಂದುವರಿಸುವ ಅರ್ಹ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.🎓 ವಿದ್ಯಾರ್ಥಿವೇತನದ ಮೊತ್ತ ಎಷ್ಟು?ವಿಶೇಷ ಬಾಲಿಕಾ ವಿದ್ಯಾರ್ಥಿವೇತನ (Special Girl Child Scholarship):
ಮೊತ್ತ : ವರ್ಷಕ್ಕೆ ₹15,000 (ಎರಡು ಕಂತುಗಳಲ್ಲಿ ತಲಾ ₹7,500 ನೀಡಲಾಗುತ್ತದೆ). ಅವಧಿ : 10ನೇ ತರಗತಿ ನಂತರದ 10+2 ಅಥವಾ ಸಮಾನ ಉನ್ನತ ಶಿಕ್ಷಣಕ್ಕೆ ಗರಿಷ್ಠ 2 ವರ್ಷಗಳವರೆಗೆ.
ಅಗತ್ಯವಿರುವ ದಾಖಲೆಗಳು
SSLC ಅಥವಾ PUC ಅಂಕಪಟ್ಟಿ, ಕುಟುಂಬದ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ), ಕಾಲೇಜಿನ ಪ್ರವೇಶ ದಾಖಲಾತಿ / ಶುಲ್ಕ ರಶೀದಿ, ಕಾಲೇಜಿನ ಗುರುತಿನ ಚೀಟಿ (College ID), ಆಧಾರ್ ಕಾರ್ಡ್ ಅಥವಾ ಮಾನ್ಯ ಗುರುತಿನ ಚೀಟಿ, ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರಗಳು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ,
ಅರ್ಜಿ ಸಲ್ಲಿಸುವ ವಿಧಾನ
1). LIC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಿದ್ಯಾರ್ಥಿವೇತನದ ಲಿಂಕ್ ಆಯ್ಕೆ ಮಾಡಿ.
2). ಅರ್ಹತಾ ನಿಯಮಗಳು ಹಾಗೂ ಷರತ್ತುಗಳನ್ನು ಪರಿಶೀಲಿಸಿ.
3). ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ಬಳಸಿ ನೋಂದಣಿ (Register) ಮಾಡಿ.
4). ವಿದ್ಯಾರ್ಥಿಯ ಹೆಸರು, ಶಿಕ್ಷಣ, ಆದಾಯ ಹಾಗೂ ಬ್ಯಾಂಕ್ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
5). ಅಗತ್ಯ ದಾಖಲೆಗಳನ್ನು ಸೂಚಿಸಿದ ನಮೂನೆಯಲ್ಲಿ ಅಪ್‌ಲೋಡ್ ಮಾಡಿ.
6). ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ಅರ್ಜಿ ಸಲ್ಲಿಸಿ (Submit) ಹಾಗೂ ಸ್ವೀಕೃತಿ ಪತ್ರವನ್ನು (Acknowledgement) ಸೇವ್ ಮಾಡಿಟ್ಟುಕೊಳ್ಳಿ.
📅 ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2026
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ