ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026: 2,482 LBO ಹುದ್ದೆಗಳಿಗೆ ಅರ್ಜಿ ಆಹ್ವಾನ – ಕರ್ನಾಟಕದಲ್ಲಿ 418 ಹುದ್ದೆಗಳು!

 

ಬ್ಯಾಂಕ್ ಆಫ್ ಬರೋಡ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ ಲೋಕಲ್ ಬ್ಯಾಂಕ್ ಆಫೀಸರ್ ( LBO - JMG/S-l ) ವಿಭಾಗದ ಒಟ್ಟು 2,482 ಸಿದ್ಧಗಳಿಗೆ ಅಧಿಕೃತ ಅಧಿಸಚನೆ ಹೊರಡಿಸಿದೆ. ಬ್ಯಾಂಕ್ ನೌಕರರು ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗದೆ ಎದುರಾಗುತ್ತಿರುವ ಸಮಸ್ಯೆಗಳಿಗೆ ಮುಕ್ತಿ ನೀಡಲು ಬ್ಯಾಂಕ್ ಆಫ್ ಬರೋಡ ಕ್ರಮ ಕೈಗೊಂಡಿದೆ.

ಗ್ರಾಮೀಣ ಬ್ಯಾಂಕಿಂಗ್ ಸೇವೆಯನ್ನು ಬಲಪಡಿಸಲು ಮತ್ತು ಸ್ಥಳೀಯ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಆಯಾ ರಾಜ್ಯದ ಸ್ಥಳೀಯ ಭಾಷಾಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾದ ಈ ಕ್ರಮದ ಭಾಗವಾಗಿ ಕರ್ನಾಟಕದಲ್ಲಿಯೂ ಕನ್ನಡ ಭಾಷೆಯ ಜ್ಞಾನವಿರುವ ಸ್ಥಳೀಯ ಅಭ್ಯರ್ಥಿಗಳಿಗೆ ದೊಡ್ಡಮಟ್ಟದ ಅವಕಾಶ ಸಿಗಲಿದೆ. ಇದು ಮಾತ್ರವಲ್ಲದೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಥಳೀಯರಿಗೆ ಮತ್ತು ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. 
ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಓಡಿಸಾ ಸೇರಿದಂತೆ ಇಪ್ಪತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬ್ಯಾಂಕ್ ಆಫ್ ಬರೋಡ ಕಾರ್ಯನಿರ್ವಹಿಸುತ್ತಿದೆ. ಈ ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ಪ್ರಾವಿನ್ಯತೆ, ಸಾಂಸ್ಕೃತಿಕ ತಿಳುವಳಿಕೆ ಮತ್ತು ಸ್ಥಳೀಯ ಮಾರುಕಟ್ಟೆಯ ಜ್ಞಾನ ಹೊಂದಿರುವವರನ್ನು ನೇಮಿಸಬೇಕು ಎಂಬುದು ಬಹುದಿನದ ಬೇಡಿಕೆಯಾಗಿತ್ತು. ಈಗಿನ ನಿರ್ಧಾರದಿಂದ ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ಸಂಬಂಧ ಗಟ್ಟಿಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡ ಹೇಳಿದೆ.
ಈ ಅಂಶಗಳನ್ನು ಗಮನಿಸಿ :
ಆಯ್ಕೆಯಾದ ನೌಕರರು ತನ್ನಗೆ ನಿಯೋಜನೆಯಾದ ರಾಜ್ಯದಲ್ಲಿ ಕನಿಷ್ಠ 12 ವರ್ಷಗಳ ಕಾಲ ಸೇವೆ ಸಲ್ಲಿಸುವುದು ಕಡ್ಡಾಯ ಅಥವಾ SMGS-IV ಗ್ರೇಡಿಗೆ ಬಡ್ತಿ ಪಡೆಯುವವರೆಗೆ ಕಾರ್ಯನಿರ್ವಹಿಸಬೇಕು. 
ಹುದ್ದೆಗಳ ಪ್ರಮುಖ ವಿವರಗಳು: 
ಸಂಸ್ಥೆ ಹೆಸರು ಬ್ಯಾಂಕ ಆಫ್ ಬರೋಡ ಹುದ್ದೆಯ ಹೆಸರು ಲೋಕಲ್ ಬ್ಯಾಂಕ್ ಆಫೀಸರ್. ಒಟ್ಟು ಹುದ್ದೆಗಳು 2,482  
ಕರ್ನಾಟಕದಲ್ಲಿ 418 ಹುದ್ದೆಗಳು :
ಖಾಲಿ ಇರುವ 2,482 ಹುದ್ದೆಗಳ ಪೈಕಿ ಕರ್ನಾಟಕ ಒಂದರಲ್ಲಿ 418 ಹುದ್ದೆಗಳು ಖಾಲಿ ಇದ್ದು, ಕನ್ನಡ ಓದಲು, ಬರೆಯಲು ಮತ್ತು ಸ್ಪಷ್ಟವಾಗಿ ಮಾತನಾಡಲು ಬರಬೇಕು ಅಂತಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. 
ವೇತನ ಶ್ರೇಣಿ : ₹48,480 - ₹85,920 ಆರಂಭಿಕ ಮೂಲವೇತನ ₹48,480
ಭಾಷಾ ಸಾಮರ್ಥ್ಯ ಪರೀಕ್ಷೆ LPT : ಎಸ್ ಎಸ್ ಎಲ್ ಸಿ ಅಥವಾ ಪಿಯುಸಿಯಲ್ಲಿ ಸ್ಥಳೀಯ ಭಾಷೆಯನ್ನು ಕನ್ನಡ ವಿಷಯವಾಗಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಇರಲಿದೆ. 
ಅರ್ಹತೆ ಮತ್ತು ಅನುಭವ: 
ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. 
ಅನುಭವ : ಯಾವುದೇ ಪದವಿ, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ನಲ್ಲಿ ಕನಿಷ್ಠ ಒಂದು ವರ್ಷ ಆಫೀಸರ್ ಆಗಿ ಕಾರ್ಯನಿರ್ವಹಿಸಿದ ಅನುಭವವಿರಬೇಕು. 
ವಯೋಮಿತಿ: 21ರಿಂದ 30 ವರ್ಷಗಳ ಒಳಗಿರಬೇಕು ಸರ್ಕಾರದ ನಿಯಮದ ಪ್ರಕಾರ ವಯೋಮಿತಿ ಸಡಲಿಕ್ಕೆ ಇರಲಿದೆ. 
ಅರ್ಜಿ ಸಲ್ಲಿಸುವ ವಿಧಾನ ಮತ್ತು ದಿನಾಂಕಗಳು : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟಂಬರ್ 7 ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕನ ಅಧಿಕೃತ ವೆಬ್ ಸೈಟ್ bankofbaroda.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. 
ಬ್ಯಾಂಕ್ ಆಫ್ ಬರೋಡ ಹೇಳಿದ್ದೇನು?
ಸ್ಥಳೀಯ ಭಾಷೆ ಬಾರದ ಬ್ಯಾಂಕ್ ಸಿಬ್ಬಂದಿಯಿಂದ ಗ್ರಾಹಕರಿಗೆ ಉಂಟಾಗುತ್ತಿದ್ದ ತೊಂದರೆಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಹಣಕಾಸು ಸಚಿವಾಲಯವು ಸ್ಥಳೀಯ ಭಾಷಾ ಕೌಶಲ್ಯವಿರುವ ನೌಕರರನ್ನು ನೇಮಿಸಿಕೊಳ್ಳುವಂತೆ ಸೂಚಿಸಿತು ಈ ಹಿನ್ನೆಲೆಯಲ್ಲಿ ಗ್ರಾಹಕರೊಂದಿಗೆ ಆಪ್ತ ಸಂಬಂಧ ಬೆಳೆಸಲು ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು ಈ ನೇಮಕ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಲಾಲ್ ಸಿಂಗ್ ತಿಳಿಸಿದ್ದಾರೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!