ಬೆಂಗಳೂರು ಗ್ರಾಮಾಂತರ ಕೋರ್ಟ್‌ನಲ್ಲಿ 21 ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿ: ಪಿಯುಸಿ ಹಾಗೂ ಡಿಪ್ಲೊಮಾ ಆದವರಿಗೆ ಉತ್ತಮ ಅವಕಾಶ!

 

ಬೆಂಗಳೂರು ಸುತ್ತಮುತ್ತ ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಇಲ್ಲೊಂದು ಒಳ್ಳೆ ಸುದ್ದಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖಾಲಿ ಇರುವ ಸ್ಟೆನೋ ಗ್ರಾಫರ್ ಗ್ರೇಡ್ 3 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಇದ್ದವರು ಕೂಡಲೇ ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ - ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹44,425 ರಿಂದ ₹83,700 ಶ್ರೇಣಿಯಲ್ಲಿ ಒಳ್ಳೆ ಸಂಬಳ ದೊರೆಯಲಿದೆ. ಕೆಲಸದ ಸ್ಥಳ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದೆ. 
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?( ಶೈಕ್ಷಣಿಕ ಅರ್ಹತೆ )
ವಿದ್ಯಾರ್ಹತೆ : ಅಭ್ಯರ್ಥಿಗಳು 12ನೇ ತರಗತಿ ಪಿಯುಸಿ ಅಥವಾ ಡಿಪ್ಲೋಮೋ ಪೂರ್ಣಗೊಳಿಸಿರಬೇಕು.
ತಾಂತ್ರಿಕ ಅರ್ಹತೆ : ಇದರ ಜೊತೆಗೆ ಶೀಘ್ರ ಲಿಪಿ ಮತ್ತು ಬೆರಳಚ್ಚು ( ಟೈಪಿಂಗ್ ) ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ ಗರಿಷ್ಠ 40ವರ್ಷ ಮೀರಿರಬಾರದು.
ವಯೋಮಿತಿ ಸಡಲಿಕೆ : ಸರ್ಕಾರದ ನಿಯಮದಂತೆ category A2,2B,3A,3B ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತುSC,ST, category-1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಲಿಕೆ ಇರುತ್ತದೆ.
ಸಾಮಾನ್ಯ ವರ್ಗ ( general ) : ₹200
OBC ಅಭ್ಯರ್ಥಿಗಳು : ₹100 / SC / ST / cat -1/ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.( ವಿನಯ್ತಿದೆ )
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ? 
ಅಭ್ಯರ್ಥಿಗಳಿಗೆ ಶೀಘ್ರ ಲಿಪಿ, ಬೆರಳಚ್ಚು ಪರೀಕ್ಷೆ ಮತ್ತು ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕೊನೆಯ ದಿನಾಂಕ :
ಅರ್ಜಿ ಸಲ್ಲಿಕೆ ಈಗಾಗಲೇ ಆಗಸ್ಟ್ 17,2026  ರಿಂದ ಆರಂಭವಾಗಿದ್ದು, ಸೆಪ್ಟಂಬರ್ 15,2026 ರವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. 
ಆಸಕ್ತಿ ಇರುವವರು ಅಧಿಕೃತ ವೆಬ್ ಸೈಟ್ Bengalururural.dcourts.gov.in ಗೆ ಭೇಟಿ ನೀಡಿ  ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಕೊನೆಯ ದಿನದವರೆಗೆ ಕಾಯದೆ ಈಗಲೇ ಅರ್ಜಿ ಹಾಕುವುದು ಒಳ್ಳೆಯದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!