ಅಜೀಂ ಪ್ರೇಮ್‌ಜಿ ದೀಪಿಕಾ ವಿದ್ಯಾರ್ಥಿವೇತನ 2026: ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ವರ್ಷಕ್ಕೆ ₹30,000 ಆರ್ಥಿಕ ನೆರವು – ಸಂಪೂರ್ಣ ವಿವರಗಳು ಇಲ್ಲಿವೆ.

 

ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ'ಅಜೀಂ ಪ್ರೇಮ್ ಜೀ ' ಫೌಂಡೇಶನ್ ಒಂದು ಉತ್ತಮ ಅವಕಾಶವನ್ನು ಕಲ್ಪಿಸಿದೆ. 2026 - 27 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಸೇರ್ಪಡೆಯಾಗಿರುವ ಹೆಣ್ಣು ವಿದ್ಯಾರ್ಥಿನಿಯರಿಗಾಗಿ ಅಜಿಂ ಪ್ರೇಮ್ ಜಿ ದೀಪಿಕಾ ವಿದ್ಯಾರ್ಥಿ ವೇತನ 2026 ಅಜೀಂ ಪ್ರೇಮ್ ಜಿ ದೀಪಿಕಾ ಸ್ಕಾಲರ್ಶಿಪ್ 2026 ಯೋಜನೆ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ಹೆಣ್ಣು ಮಕ್ಕಳು ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಈ ಸ್ಕಾಲರ್ಶಿಪ್ನ ಮೊತ್ತ, ಅರ್ಹತೆಗಳು, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರ ಇಲ್ಲಿದೆ. 
ವಿದ್ಯಾರ್ಥಿ ವೇತನದ ಮೊತ್ತ ಮತ್ತು ಪ್ರಯೋಜನಗಳು. 
ವಾರ್ಷಿಕ ನೆರವು : ಆಯ್ಕೆಯಾಗುವ ಅರ್ಹ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಗರಿಷ್ಠ ಮೊತ್ತ : ಕೋರ್ಸ್ನ ಅವತ್ತಿಗೆ ಅಂದರೆ 2 ರಿಂದ 5 ವರ್ಷಗಳು ಅನುಗುಣವಾಗಿ ಗರಿಷ್ಠ 1.5 ಲಕ್ಷದವರೆಗೆ ಆರ್ಥಿಕ ನೆರವು ದೊರೆಯಲಿದೆ. ಬಳಕೆ : ಈ ಹಣವನ್ನು ಕಾಲೇಜು ಶುಲ್ಕ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಇತರ ವೆಚ್ಚಗಳಿಗೆ ಬಳಸಬಹುದು. 
ಅರ್ಜಿ ಸಲ್ಲಿಸಲು ಯಾರು ಅರ್ಹರು?
1. ಲಿಂಗ : ಅರ್ಜಿದಾರರು ಕಡ್ಡಾಯವಾಗಿ ಹೆಣ್ಣು ವಿದ್ಯಾರ್ಥಿನಿ ಆಗಿರಬೇಕು. 2. ಶಾಲಾ ಶಿಕ್ಷಣ : ಹತ್ತನೇ ಮತ್ತು ಹನ್ನೆರಡನೇ ತರಗತಿಯನ್ನು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಸರ್ಕಾರಿ ಶಾಲೆ ಅಥವಾ ಕಾಲೇಜಿನಲ್ಲಿ ನಿಯಮಿತ ವಿದ್ಯಾರ್ಥಿನಿಯಾಗಿ ಪೂರ್ಣಗೊಳಿಸಿರಬೇಕು. 3 : ಪ್ರಸ್ತುತ ವ್ಯಾಸಂಗ : 2026- 27ರ ಶೈಕ್ಷಣಿಕ ವರ್ಷದಲ್ಲಿ ಮೊದಲ ವರ್ಷದ ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶ ಪಡೆದಿರಬೇಕು. 4 : ಕೋರ್ಸ್ ಅವಧಿ : ಪದವಿ ಅಥವಾ ಡಿಪ್ಲೋಮಾ ಕೋರ್ಸ್ನ ಅವಧಿಯ ಸಾಮಾನ್ಯವಗಿ ಎರಡರಿಂದ ಐದು ವರ್ಷಗಳ ನಡುವೆ ಇರಬೇಕು. 5 : ಕಾಲೇಜು ಮಾನ್ಯತೆ : ಸರ್ಕಾರಿ ಅಥವಾ ವಿಶ್ವಾಸಾರ್ಹ ಖಾಸಗಿ ಕಾಲೇಜು/ವಿಶ್ವವಿದ್ಯಾಲಯದಲ್ಲಿ ನಿಯಮಿತ ವಿದ್ಯಾರ್ಥಿನಿಯಾಗಿ ವ್ಯಾಸಂಗ ಮಾಡುತ್ತಿರಬೇಕು. 6 : ಸ್ಥಳೀಯತೆ : ಕರ್ನಾಟಕ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತಿಸ್ಗಢ, ದೆಹಲಿ, ಜಾರ್ಖಂಡ್, ಮಧ್ಯ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಓಡಿಸಾ, ಪುದುಚೇರಿ, ರಾಜಸ್ಥಾನ್, ಸಿಕ್ಕಿಂ, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಖಾಂಡ ರಾಜ್ಯಗಳ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಯಾರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ?
ಪದವಿ ಅಥವಾ ಡಿಪ್ಲೋಮಾ ಕೋರ್ಸ್ ನ ಎರಡನೇ, ಮೂರನೇ ಅಥವಾ ನಂತರದ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಡಿಸ್ಟೆನ್ಸ್ ಅಂಡ್ ಲರ್ನಿಂಗ್ ಅಥವಾ ಅಂಚೆ ತೆರೆಪಿನ ಶಿಕ್ಷಣ ಪಡೆಯುತ್ತಿರುವವರು ಅರ್ಹರಾಗಿರುವುದಿಲ್ಲ. ಅಜೀಂ ಪ್ರೇಮ್ ಜಿ ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದಿರುವವರು ಮತ್ತು ಹಿಂದೆ ವಿಪ್ರೋ ಸ್ಕಾಲರ್ಶಿಪ್ ಪಡೆದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅಗತ್ಯವಿರುವ ದಾಖಲೆಗಳು 
ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ( PDF,PNG, ಅಥವಾ JPG ಫಾರ್ಮೆಟ್ ನಲ್ಲಿ 30KB ಯಿಂದ 500KB ಒಳಗೆ ) ಅಪ್ಲೋಡ್ ಮಾಡಬೇಕಾಗುತ್ತದೆ. 
ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮೊದಲ ಪುಟದ ಪ್ರತಿ ಖಾತೆ ವಿವರ, ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್, 12ನೇ ತರಗತಿ ಮಾರ್ಕ್ಸ್ ಕಾರ್ಡ್, ಕಾಲೇಜಿನ Bonafide ಸರ್ಟಿಫಿಕೇಟ್ ಅಥವಾ ಟ್ಯೂಷನ್ ಫ್ರೀ ಜಮಾ ಮಾಡಿದ ರಸೀದಿ. 
ಅರ್ಜಿ ಸಲ್ಲಿಸುವ ಸರಳ ವಿಧಾನ 
ಅಜೀಂ ಪ್ರೇಮ್ ಜಿ ಫೌಂಡೇಶನ್ ಅಧಿಕೃತ ಸ್ಕಾಲರ್ಶಿಪ್ ಪೋರ್ಟಲ್ ಗೆ ಭೇಟಿ ನೀಡಿ. ನ್ಯೂ ರಿಜಿಸ್ಟ್ರೇಷನ್-2026 ಕೋಹಾರ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ವಯಕ್ತಿಕ ಸಂಪರ್ಕ ಮತ್ತು ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನಮೂದಿಸಿ, ಹತ್ತನೇ 12ನೇ ತರಗತಿಯ ವಿವರಗಳು ಹಾಗೂ ಪ್ರಸ್ತುತ ಸೇರ್ಪಡೆಯಾಗಿರುವ ಕಾಲೇಜಿನ ಮಾಹಿತಿಯನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಅಂದರೆ ಫೋಟೋ, ಆಧಾರ್, ಅಂಕಪಟ್ಟಿ, ಬ್ಯಾಂಕ್ ವಿವರ ಇತ್ಯಾದಿ. ಅಧಿಕೃತ ಸೈಟ್ ನಲ್ಲಿ ಅಪ್ಲೋಡ್ ಮಾಡಿ. ನಮೂದಿಸಿದ ವಿವರಗಳನ್ನು ಒಮ್ಮೆ ಪರಿಶೀಲಿಸಿ ಅರ್ಜಿ ಸಬ್ಮಿಟ್ ಮಾಡಿ, ಅರ್ಜಿ ಸಲ್ಲಿಸಿದ ನಂತರ ದೊರೆಯುವ ಅಪ್ಲಿಕೇಶನ್ ಐಡಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಅರ್ಜಿಯ ಸ್ಥಿತಿಯನ್ನು ತಿಳಿಯಲು ಇದು ಅಗತ್ಯ. 
ಅರ್ಜಿ ಶುಲ್ಕ ಮತ್ತು ಕೊನೆಯ ದಿನಾಂಕ 
ಅರ್ಜಿ ಶುಲ್ಕ : ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ( ಉಚಿತ ). ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ " ಆಗಸ್ಟ್ 31-206 "
ಗಮನಿಸಿ : ವಿದ್ಯಾರ್ಥಿ ವೇತನದ ಹೆಸರಿನಲ್ಲಿ ಯಾರಿಗೂ ಹಣ ನೀಡಬೇಡಿ ಅಧಿಕೃತ ವೆಬ್ಸೈಟ್ ನ ಮೂಲಕ ಉಚಿತವಾಗಿಯೇ ಅರ್ಜಿ ಸಲ್ಲಿಸಿ. 

www.gombekannada.com



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!