RRB Recruitment 2026: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ; 3,993 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

 

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ಕೇಂದ್ರೀಕೃತ ಉದ್ಯೋಗ ಅಧಿಸೂಚನೆ (CEN 04/2026) ಮೂಲಕ ಜೂನಿಯರ್ ಇಂಜಿನಿಯರ್ (JE) ಹಾಗೂ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 3,993 ಹುದ್ದೆಗಳು ಖಾಲಿಯಿದ್ದು, ಎಂಜಿನಿಯರಿಂಗ್, ಡಿಪ್ಲೊಮಾ ಹಾಗೂ B.Sc ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
.  ಒಟ್ಟು ಹುದ್ದೆಗಳು : 3,993 (ಇದರಲ್ಲಿ ಸಿಖಂದರಾಬಾದ್ ರೈಲ್ವೆ ವಲಯಕ್ಕೆ 110 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ).

.  ಹುದ್ದೆಯ ಹೆಸರುಗಳು : ಜೂನಿಯರ್ ಇಂಜಿನಿಯರ್ (JE) ಮತ್ತು ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS).

.  ವೇತನ ಶ್ರೇಣಿ : 7ನೇ ವೇತನ ಆಯೋಗದ ಪ್ರಕಾರ ಆರಂಭಿಕ ಮೂಲ ವೇತನ ತಿಂಗಳಿಗೆ ₹ 35,400 ಆಗಿರುತ್ತದೆ. ಇದರ ಜೊತೆಗೆ ಮನೆ ಬಾಡಿಗೆ ಭತ್ಯೆ (HRA), ತುಟ್ಟಿಭತ್ಯೆ (DA) ಸೇರಿದಂತೆ ವಿವಿಧ ಭತ್ಯೆಗಳು ಲಭ್ಯವಿರುತ್ತವೆ.

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
.   ಶೈಕ್ಷಣಿಕ ಅರ್ಹತೆ: ಹುದ್ದೆಗೆ ಅನುಗುಣವಾಗಿ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ (ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್, ಐಟಿ ಇತ್ಯಾದಿ) ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ (B.E/B.Tech) ಅಥವಾ B.Sc ಪೂರ್ಣಗೊಳಿಸಿರಬೇಕು.

.  ವಯೋಮಿತಿ (ಜನವರಿ 1, 2027 ರ ವೇಳೆಗೆ): 18 ರಿಂದ 33 ವರ್ಷ.
. OBC ಅಭ್ಯರ್ಥಿಗಳಿಗೆ : 3 ವರ್ಷ ಸಡಿಲಿಕೆ
. SC / ST ಅಭ್ಯರ್ಥಿಗಳಿಗೆ : 5 ವರ್ಷಗಳ ಸಡಿಲಿಕೆ
. PwBD ಮತ್ತು ಮಾಜಿ ಸೈನಿಕರಿಗೆ : ನಿಯಮಾನುಸಾರ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ
ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು (CBT-I ಮತ್ತು CBT-II), ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ.

.  CBT-I: 90 ನಿಮಿಷಗಳ ಅವಧಿ, ಒಟ್ಟು 100 ಅಂಕಗಳ 100 ಪ್ರಶ್ನೆಗಳು (ಗಣಿತ-30, ಸಾಮಾನ್ಯ ವಿಜ್ಞಾನ-30, ಸಾಮರ್ಥ್ಯ & ತಾರ್ಕಿಕತೆ-25, ಸಾಮಾನ್ಯ ಅರಿವು-15).
.  CBT-II: 2 ಗಂಟೆಗಳ ಅವಧಿ, ಒಟ್ಟು 150 ಅಂಕಗಳ 150 ಪ್ರಶ್ನೆಗಳು (ತಾಂತ್ರಿಕ ಸಾಮರ್ಥ್ಯ-100, ಭೌತಶಾಸ್ತ್ರ & ರಸಾಯನಶಾಸ್ತ್ರ-15, ಸಾಮಾನ್ಯ ಅರಿವು-15, ಕಂಪ್ಯೂಟರ್ ಬೇಸಿಕ್ಸ್-10, ಪರಿಸರ & ಮಾಲಿನ್ಯ ನಿಯಂತ್ರಣ-10).
.  ಋಣಾತ್ಮಕ ಅಂಕಗಳು: ಎರಡೂ ಪರೀಕ್ಷೆಗಳಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1/3 ಋಣಾತ್ಮಕ ಅಂಕ ಇರುತ್ತದೆ.

ಅರ್ಜಿ ಶುಲ್ಕ ವಿವರ
.  ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ: ₹ 500 (CBT-I ಪರೀಕ್ಷೆಗೆ ಹಾಜರಾದ ನಂತರ ₹ 400 ಮರುಪಾವತಿಯಾಗುತ್ತದೆ).
.  SC / ST / EBC / ದಿವ್ಯಾಂಗ ಅಭ್ಯರ್ಥಿಗಳಿಗೆ: ₹ 250 (CBT-I ಪರೀಕ್ಷೆ ಬರೆದರೆ ಪೂರ್ಣ ಮೊತ್ತ ಮರುಪಾವತಿಯಾಗುತ್ತದೆ).

ಪ್ರಮುಖ ದಿನಾಂಕಗಳು
. ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 14 ಆಗಸ್ಟ್ 2026
. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ಸೆಪ್ಟೆಂಬರ್ 2026
. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 15 ಸೆಪ್ಟೆಂಬರ್ 2026
ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಆಯಾ RRB ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ. ಅಗತ್ಯ ದಾಖಲೆಗಳು, ಆನ್‌ಲೈನ್ ಅರ್ಜಿ ಸಲ್ಲಿಸುವ ಸರಳ ಹಂತಗಳು ಹಾಗೂ ಅನ್ನಸೇವೆ ಆಪ್ ಮೂಲಕ ಮನೆಬಾಗಿಲಲ್ಲೇ ಇ-ಕೆವೈಸಿ ಮಾಡುವ ಸಂಪೂರ್ಣ ವಿವರ ಇಲ್ಲಿದೆ.

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!