RRB JE Recruitment 2026: ಭಾರತೀಯ ರೈಲ್ವೆಯಲ್ಲಿ 4,098 ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಬೃಹತ್ ನೇಮಕಾತಿ!
ರೈಲ್ವೆ ನೇಮಕಾತಿ ಮಂಡಳಿ (RRB) ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ (JE) ಸೇರಿದಂತೆ ಒಟ್ಟು 4,098 ಹುದ್ದೆಗಳ ಭರ್ತಿಗೆ ಕೇಂದ್ರೀಕೃತ ಉದ್ಯೋಗ ಕಿರು ಅಧಿಸೂಚನೆ (CGL 04/2026) ಬಿಡುಗಡೆ ಮಾಡಿದೆ.
ಎಂಜಿನಿಯರಿಂಗ್ ಡಿಪ್ಲೋಮಾ ಮತ್ತು ಪದವಿ ಮುಗಿಸಿ ರೈಲ್ವೆ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಇರುವ ಎಲ್ಲಾ ರೈಲ್ವೆ ವಲಯಗಳಲ್ಲಿ ಖಾಲಿ ಇರುವ 4,098 ಜೂನಿಯರ್ ಎಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ.
ಹುದ್ದೆಗಳ ವಿವರ (Post Details)
ರೈಲ್ವೆ ನೇಮಕಾತಿ ಮಂಡಳಿಯು ಕೇಂದ್ರಿಕೃತ ಉದ್ಯೋಗ ಕಿರು ಅಧಿಸೂಚನೆ (CGL 04/2026) ಹೊರಡಿಸಿದ್ದು, ಈ ಕೆಳಗಿನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ:
1. ಜೂನಿಯರ್ ಎಂಜಿನಿಯರ್ (Junior Engineer - JE)
2. ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (Depot Material Superintendent)
3. ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ (Chemical & Metallurgical Assistant)
ಅರ್ಹತೆ ಮತ್ತು ವಯೋಮಿತಿ (Eligibility & Age Limit)
1. ಶೈಕ್ಷಣಿಕ ಅರ್ಹತೆ: ಸಂಬಂಧಿಸಿದ ವಿಭಾಗದಲ್ಲಿ ಎಂಜಿನಿಯರಿಂಗ್ ಡಿಪ್ಲೋಮಾ, ಬಿ.ಇ/ಬಿ.ಟೆಕ್ ಪದವಿ (B.E/B.Tech) ಅಥವಾ ಬಿ.ಎಸ್ಸಿ (B.Sc) ಉತ್ತೀರ್ಣರಾಗಿರಬೇಕು.
2. ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ ಶ್ರೇಣಿ (Salary Details)
ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಇತರ ಭತ್ಯೆಗಳ ಜೊತೆಗೆ ಮಾಸಿಕ ₹35,400 ಆರಂಭಿಕ ಮೂಲ ವೇತನ ದೊರೆಯಲಿದೆ.
ಆಯ್ಕೆ ಪ್ರಕ್ರಿಯೆ (Selection Process)
ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಕೆಳಗಿನ ಹಂತಗಳ ಮೂಲಕ ಮಾಡಲಾಗುತ್ತದೆ:
1. ಹಂತ-1 ಮತ್ತು ಹಂತ-2 ಸಿಬಿಟಿ ಪರೀಕ್ಷೆಗಳು: ಆನ್‌ಲೈನ್ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಗಳು (CBT-1 & CBT-2).
2. ದಾಖಲೆಗಳ ಪರಿಶೀಲನೆ: ಮೂಲ ಪ್ರಮಾಣಪತ್ರಗಳ ಪರಿಶೀಲನೆ (Document Verification).
3. ವೈದ್ಯಕೀಯ ಪರೀಕ್ಷೆ: ರೈಲ್ವೆ ವೈದ್ಯಕೀಯ ಪರೀಕ್ಷೆ (Medical Examination).
ಪ್ರಮುಖ ದಿನಾಂಕಗಳು (Important Dates)
1. ಪೂರ್ಣ ಅಧಿಸೂಚನೆ ಬಿಡುಗಡೆ ದಿನಾಂಕ: 13 ಆಗಸ್ಟ್ 2026
2. ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 14 ಆಗಸ್ಟ್ 2026
3. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಸೆಪ್ಟೆಂಬರ್ 2026
4. CBT-1 ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ಘೋಷಿಸಲಾಗುವುದು.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ