AAI Recruitment 2026: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 389 ಹುದ್ದೆಗಳಿಗೆ ಅರ್ಜಿ ಆಹ್ವಾನ! ₹1.80 ಲಕ್ಷದವರೆಗೆ ವೇತನ.
ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಭರ್ಜರಿ ಉದ್ಯೋಗಾವಕಾಶ ನೀಡಿದೆ. AAI ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಮತ್ತು ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಒಟ್ಟು 389 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಮತ್ತು ಶೈಕ್ಷಣಿಕ ಅರ್ಹತೆ :
. ಒಟ್ಟು ಹುದ್ದೆಗಳು : 389
. ವಿಭಾಗಗಳು : ವಾಸ್ತುಶಿಲ್ಪ, ಹಣಕಾಸು, ಅಗ್ನಿಶಾಮಕ ಸೇವೆ, ಮಾಹಿತಿ ತಂತ್ರಜ್ಞಾನ (IT), ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಾರ್ಪೊರೇಟ್ ಪ್ಲಾನಿಂಗ್, ನಿರ್ವಹಣಾ ಸೇವೆಗಳು.
. ಶೈಕ್ಷಣಿಕ ಅರ್ಹತೆ : ಹುದ್ದೆಗೆ ಅನುಗುಣವಾಗಿ ಸಂಬಂಧಿಸಿದ ವಿಭಾಗದಲ್ಲಿ ಡಿಪ್ಲೊಮಾ, ITI, BE/B.Tech, MBA, MCA ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕೆಲವು ಹುದ್ದೆಗಳಿಗೆ ಕೆಲಸದ ಅನುಭವ ಅಗತ್ಯವಿರುತ್ತದೆ.
ವಯೋಮಿತಿ ಮತ್ತು ವೇತನ ಶ್ರೇಣಿ :
ವಯೋಮಿತಿ (ಸೆಪ್ಟೆಂಬರ್ 7, 2026 ಕ್ಕೆ ಅನ್ವಯಿಸುವಂತೆ):
. ಮ್ಯಾನೇಜರ್ ಹುದ್ದೆ: ಗರಿಷ್ಠ 32 ವರ್ಷ
. ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆ: ಗರಿಷ್ಠ 27 ವರ್ಷ
. ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC (NCL) ಅಭ್ಯರ್ಥಿಗಳಿಗೆ 3 ವರ್ಷ.
ವೇತನ ಶ್ರೇಣಿ :
. ಮ್ಯಾನೇಜರ್: ₹60,000 ರಿಂದ ₹1,80,000
. ಜೂನಿಯರ್ ಎಕ್ಸಿಕ್ಯೂಟಿವ್: ₹40,000 ರಿಂದ ₹1,40,000
ಆಯ್ಕೆ ಪ್ರಕ್ರಿಯೆ :
. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) : ಈ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳು (Negative Marking) ಇರುವುದಿಲ್ಲ.
. ಸಂದರ್ಶನ/ಪರಿಶೀಲನೆ : CBT ನಂತರ ಅರ್ಜಿ ಪರಿಶೀಲನೆ, ಹುದ್ದೆಗೆ ಅನುಗುಣವಾಗಿ ಸಂದರ್ಶನ ಮತ್ತು ದೈಹಿಕ ಮಾಪನ/ಚಾಲನಾ/ಸಹಿಷ್ಣುತೆ ಪರೀಕ್ಷೆ (ಅಗ್ನಿಶಾಮಕ ಹುದ್ದೆಗಳಿಗೆ) ನಡೆಯಲಿದೆ.
ಪ್ರಮುಖ ದಿನಾಂಕಗಳು :
. ಅರ್ಜಿ ಸಲ್ಲಿಕೆ ಆರಂಭ : ಆಗಸ್ಟ್ 8, 2026
. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 7, 2026
. ಅರ್ಜಿ ಸಲ್ಲಿಸುವ ವಿಧಾನ : AAI ನ ಅಧಿಕೃತ ನೇಮಕಾತಿ ಪೋರ್ಟಲ್ ಮೂಲಕವೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ