KEA Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಕೆಇಎ ಇಂದ ಬಂಪರ್ ಕೊಡುಗೆ! ಒಂದೇ ದಿನ 4 ಬೃಹತ್ ಅಧಿಸೂಚನೆ; 4,723 ಹುದ್ದೆಗಳ ನೇಮಕಾತಿ ಆರಂಭ; ಇಲ್ಲಿದೆ ಇಲಾಖಾವಾರು ಕಂಪ್ಲೀಟ್ ವಿವರ!
ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಯುವಜನತೆಯ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಒಂದೇ ದಿನದಲ್ಲಿ ವಿವಿಧ ಇಲಾಖೆಗಳ ಒಟ್ಟು 4,723 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ವಸತಿ, ಶಿಕ್ಷಣ ಸಂಸ್ಥೆಗಳು, ಪೊಲೀಸ್ ಇಲಾಖೆ, ಹಾಗೂ ಕಂದಾಯ ಇಲಾಖೆಯನ್ನೊಳಗೊಂಡ ಈ ಬೃಹತ್ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ? ವಿದ್ಯಾರ್ಹತೆ ಏನು? ಎಂಬ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
. ಇಲಾಖಾವಾರು ಹುದ್ದೆಗಳ ವಿವರಗಳು (Department-wise Vacancy Breakdown)
. ಕೆಇಎ ಪ್ರಕಟಿಸಿರುವ ಒಟ್ಟು 4,723 ಹುದ್ದೆಗಳ ಇಲಾಖಾವಾರು ಮತ್ತು ವೃಂದವಾರು ಪಟ್ಟಿ ಇಲ್ಲಿದೆ :
ಇಲಾಖೆ/ಹುದ್ದೆಯ ಹೆಸರು / ಉಳಿಕೆ ಮೂಲ ವೃಂದ (RPC) / ಕಲ್ಯಾಣ ಕರ್ನಾಟಕ (KK) / ಸ್ಥಳೀಯ ವೃಂದ / ಒಟ್ಟು ಹುದ್ದೆಗಳು
1. ಭೂಮಾಪಕರು (Surveyors) : ( RPC ) 560 / ( KK ) 190 / ಒಟ್ಟು ಹುದ್ದೆಗಳು : 750
2. ವಸತಿ ಶಾಲೆ ಶಿಕ್ಷಕರು (KISIES) : ( RPC ) 767 / ( KK )320 / ಒಟ್ಟು ಹುದ್ದೆಗಳು : 1,087
3. ಗ್ರಾಮ ಆಡಳಿತ ಅಧಿಕಾರಿ (VA) : ( RPC ) 505 / ( KK )67 / ಒಟ್ಟು ಹುದ್ದೆಗಳು : 572
4. ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (KSRTC) /( RPC) 1455 / 859(ಸ್ಥಳೀಯ ವೃಂದ) : 1,455+
5. ಒಟ್ಟು ಹುದ್ದೆಗಳು : 4,723
6. ಅಧಿಕೃತ ವೆಬ್ ಸೈಟ್ : kea.kar.nic.in
1. ಪ್ರಮುಖ ಹುದ್ದೆಗಳ ಅರ್ಹತೆ ಮತ್ತು ವೇತನ ಶ್ರೇಣಿ (Eligibility & Salary)
. ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್/ತಂತ್ರಜ್ಞಾನ ಪದವಿ ಅಥವಾ ಬಿ.ಎಸ್.ಸಿ (ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಐಟಿ ಮುಂತಾದ ವಿಷಯಗಳು) ಅಥವಾ ಇಂಜಿನಿಯರಿಂಗ್ ಡಿಪ್ಲೊಮಾ ಮುಗಿಸಿರಬೇಕು.
. ವೇತನ ಶ್ರೇಣಿ: ಮಾಸಿಕ ₹37,500 ರಿಂದ ₹76,100 ರವರೆಗೆ ಇರಲಿದೆ.
2. ವಸತಿ ಶಾಲೆ ಶಿಕ್ಷಕರು (Teachers):
. ವಿವರ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಧೀನದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ (62+103), ಆಂಗ್ಲ (69+108), ಹಿಂದಿ (31+55), ಗಣಿತ (35+103), ವಿಜ್ಞಾನ (32+106), ಸಮಾಜ ವಿಜ್ಞಾನ (24+154) ಸೇರಿದಂತೆ ದೈಹಿಕ ಶಿಕ್ಷಣ, ಕಂಪ್ಯೂಟರ್ ಮತ್ತು ಚಿತ್ರಕಲಾ ಶಿಕ್ಷಕರ ಭರ್ತಿ ನಡೆಯಲಿದೆ.
. ಅರ್ಹತೆ : ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (TET) ಅರ್ಹತೆ ಹೊಂದಿರಬೇಕು (ದೈಹಿಕ, ಗಣಕ, ಚಿತ್ರಕಲಾ ಶಿಕ್ಷಕರ ಹುದ್ದೆ ಹೊರತುಪಡಿಸಿ).
3. ಗ್ರಾಮ ಆಡಳಿತ ಅಧಿಕಾರಿ (Village Accountant - VA) :
ವಿವರ : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ಹುದ್ದೆಗಳು. ಉಳಿಕೆ ಮೂಲ ವೃಂದದ 505 ಹುದ್ದೆಗಳನ್ನು 21 ಜಿಲ್ಲೆಗಳಲ್ಲಿ ಭರ್ತಿ ಮಾಡಲಾಗುತ್ತಿದೆ. (ಉದಾಹರಣೆಗೆ: ತುಮಕೂರು- 50, ಮೈಸೂರು- 45, ಮಂಡ್ಯ- 50, ಬೆಳಗಾವಿ- 48 ಹುದ್ದೆಗಳು).
. ವಿದ್ಯಾರ್ಹತೆ : ಪಿಯುಸಿ (PUC) ಅಥವಾ ತತ್ಸಮಾನ ವಿದ್ಯಾರ್ಹತೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ.
4. ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (KSRP/KSISF) :
. ವಿವರ : ಒಟ್ಟು 1455 ಹುದ್ದೆಗಳ ಭರ್ತಿ (ಪುರುಷ- 1382 ಮತ್ತು ಮಹಿಳಾ- 73). ಲಿಖಿತ ಪರೀಕ್ಷೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.
. ಗರಿಷ್ಠ ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 33 ವರ್ಷ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ (2A, 2B, 3A, 3B) ಅಭ್ಯರ್ಥಿಗಳಿಗೆ 35 ವರ್ಷ ಹಾಗೂ ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಲಾಗಿದೆ.
. ರೋಸ್ಟರ್ ವಿವಾದ ಮತ್ತು ಗೊಂದಲ (Roster Issue)
ಪ್ರಸ್ತುತ ಗ್ರಾಮ ಆಡಳಿತಾಧಿಕಾರಿ ನೇಮಕಾತಿಯಲ್ಲಿ ಒಬಿಸಿ (OBC) ವರ್ಗದ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಯಲ್ಲಿ ಕೆಲವು ಇತರೆ ಹುದ್ದೆಗಳು (ಪುರುಷ) ಶೂನ್ಯವಾಗಿವೆ ಎಂಬ ಆರೋಪ ಕೇಳಿಬಂದಿದ್ದು, ಅಭ್ಯರ್ಥಿಗಳಲ್ಲಿ ರೋಸ್ಟರ್ ವ್ಯವಸ್ಥೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ರೋಸ್ಟರ್ ಸರಿಪಡಿಸಲು ಕಂದಾಯ ಇಲಾಖೆ ತಕ್ಷಣ ಗಮನ ಹರಿಸಬೇಕೆಂದು ಉದ್ಯೋಗಾಕಾಂಕ್ಷಿಗಳು ಒತ್ತಾಯಿಸುತ್ತಿದ್ದಾರೆ.
. ಅರ್ಜಿ ಸಲ್ಲಿಸುವುದು ಹೇಗೆ? (How to Apply)
. ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇಲಾಖಾವಾರು ಲಿಂಕ್‌ಗಳು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿವೆ.
ಅಧಿಕೃತ ವೆಬ್ ಸೈಟ್ : ( kea.kar.nic.in ) ಭೇಟಿ ನೀಡಲು ಸೂಚಿಸಲಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ