🎓📝 UGC NET ಅಭ್ಯರ್ಥಿಗಳಿಗೆ ಪ್ರಮುಖ ಅಲರ್ಟ್: ಜೂನ್ 2026 ರ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆUGC NET Admit Card 2026 Out: ಯುಜಿಸಿ ನೆಟ್ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ; ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೇರ ಲಿಂಕ್!

 

ದೇಶಾದ್ಯಂತ ಉನ್ನತ ಶಿಕ್ಷಣ ವಲಯದಲ್ಲಿ ಬೋಧನಾ ವೃತ್ತಿ ಅಥವಾ ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಭರ್ಜರಿ ಅಪ್ಡೇಟ್ ನೀಡಿದೆ. ಜೂನ್ 2026 ರ ಸಾಲಿನ ಯುಜಿಸಿ ನೆಟ್ (UGC NET - University Grants Commission National Eligibility Test) ಪರೀಕ್ಷೆಯ ಪ್ರವೇಶ ಪತ್ರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇಂದಿನಿಂದಲೇ ತಮ್ಮ ಹಾಲ್ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು. ಪರೀಕ್ಷೆಗಳು ಯಾವಾಗ ಆರಂಭವಾಗಲಿವೆ? ಪ್ರವೇಶ ಪತ್ರವನ್ನು ಹಂತ-ಹಂತವಾಗಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಮತ್ತು ಪರೀಕ್ಷಾ ಕೇಂದ್ರಕ್ಕೆ ಹೋಗುವಾಗ ನೆನಪಿನಲ್ಲಿಡಬೇಕಾದ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ.

"UGC NET ಜೂನ್ 2026: ಹಾಲ್ ಟಿಕೆಟ್ ಬಿಡುಗಡೆ! ಡೌನ್‌ಲೋಡ್ ಮಾಡೋ ಡೈರೆಕ್ಟ್ ಲಿಂಕ್ ಇಲ್ಲಿದೆ"


. UGC NET June 2026 Admit Card ಬಿಡುಗಡೆ: 22 ರಿಂದ 30 ಜೂನ್ ಪರೀಕ್ಷೆ.


. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) : ಜೂನ್ 2026 ರ "UGC NET ಪರೀಕ್ಷೆಯ ಪ್ರವೇಶ ಪತ್ರ" ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು   ugcnet.nta.nic.in ಗೆ ಭೇಟಿ ನೀಡಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ದ ಮೂಲಕ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.


. ಪರೀಕ್ಷೆಗಳು ಜೂನ್ 22 ರಿಂದ 30 ರವರೆಗೆ : ನಡೆಯಲಿದ್ದು, ಪ್ರವೇಶ ಪತ್ರದ "ಪ್ರಿಂಟ್‌ಔಟ್ ಮತ್" ID ಪ್ರೂಫ್ ಕಡ್ಡಾಯ.


. UGC NET Admit Card 2026 : 5 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಿ

ವಿವರ ಮಾಹಿತಿ

1 . ಪರೀಕ್ಷೆ ಹೆಸರು : UGC NET June 2026

2. ನಡೆಸುವ ಸಂಸ್ಥೆ : NTA — National Testing Agency

3. ಅಡ್ಮಿಟ್ ಕಾರ್ಡ್ ರಿಲೀಸ್ : "ಜೂನ್ 2026, 2ನೇ ವಾರ"

4. ಪರೀಕ್ಷಾ ದಿನಾಂಕ : 22 ಜೂನ್ 2026 ರಿಂದ 30 ಜೂನ್ 2026

5. ಅಧಿಕೃತ ವೆಬ್‌ಸೈಟ್ : ugcnet.nta.nic.in

6. ಡೌನ್‌ಲೋಡ್ ಮಾಡಲು ಬೇಕಾದ್ದು : Application Number + DOB + Security Pin

1. ಹಾಲ್ ಟಿಕೆಟ್ ಡೌನ್‌ಲೋಡ್ ಮಾಡೋದು ಹೇಗೆ? ಸ್ಟೆಪ್ ಬೈ ಸ್ಟೆಪ್


1. ಸ್ಟೆಪ್ 1 : Google ನಲ್ಲಿ "ugcnet.nta.nic.in" ಸರ್ಚ್ ಮಾಡಿ. ಫೇಕ್ ಸೈಟ್‌ಗೆ ಹೋಗಬೇಡಿ.

2. ಸ್ಟೆಪ್ 2 : ಹೋಮ್‌ಪೇಜ್‌ನಲ್ಲಿ "Download Admit Card for UGC NET June 2026" ಲಿಂಕ್ ಕ್ಲಿಕ್ ಮಾಡಿ.

3. ಸ್ಟೆಪ್ 3 : ನಿಮ್ಮ Application Number, ಜನ್ಮ ದಿನಾಂಕ, ಸೆಕ್ಯುರಿಟಿ ಪಿನ್ ಹಾಕಿ Login ಆಗಿ.

4. ಸ್ಟೆಪ್ 4 : ಸ್ಕ್ರೀನ್ ಮೇಲೆ ನಿಮ್ಮ ಅಡ್ಮಿಟ್ ಕಾರ್ಡ್ ಕಾಣುತ್ತೆ. PDF ಡೌನ್‌ಲೋಡ್ ಮಾಡಿ 2-3 ಪ್ರಿಂಟ್ತೆಗೆದಿಟ್ಟುಕೊಳ್ಳಿ.


. ಪ್ರಾಬ್ಲಂ ಆದ್ರೆ : "Invalid Credentials" ಅಂತ ಬಂದ್ರೆ Forgot Application Number ಆಪ್ಷನ್ ಕ್ಲಿಕ್ ಮಾಡಿ. NTA ಹೆಲ್ಪ್‌ಲೈನ್: 011-40759000


2. ಅಡ್ಮಿಟ್ ಕಾರ್ಡ್‌ನಲ್ಲಿ ಏನೇನ್ ಚೆಕ್ ಮಾಡಬೇಕು?


ಡೌನ್‌ಲೋಡ್ ಮಾಡಿದ ತಕ್ಷಣ ಈ 5 ವಿಷಯ ಸರಿ ಇದ್ಯಾ ನೋಡಿ. ತಪ್ಪಿದ್ರೆ ತಕ್ಷಣ NTA ಗೆ ಮೇಲ್ ಮಾಡಿ.


1. ನಿಮ್ಮ ಹೆಸರು, ಫೋಟೋ, ಸಿಗ್ನೇಚರ್ — ಅರ್ಜಿಯಲ್ಲಿ ಕೊಟ್ಟಿದ್ದೇ ಇದ್ಯಾ?

2. ಪರೀಕ್ಷಾ ದಿನಾಂಕ & ಶಿಫ್ಟ್ ಟೈಮಿಂಗ್ — Paper 1 & Paper 2 ಟೈಮ್ ನೋಡಿ.

3. ಪರೀಕ್ಷಾ ಕೇಂದ್ರದ ವಿಳಾಸ — ಗೂಗಲ್ ಮ್ಯಾಪ್‌ನಲ್ಲಿ ಮೊದಲೇ ಚೆಕ್ ಮಾಡಿ.

4. ರೋಲ್ ನಂಬರ್ & ಅಪ್ಲಿಕೇಶನ್ ನಂಬರ್

5. ಸೂಚನೆಗಳು — ಏನು ತಗೊಂಡು ಹೋಗಬೇಕು, ಏನು ಬೇಡ ಅಂತ ಓದಿ.


⚠️ಎಚ್ಚರಿಕೆ : ಅಡ್ಮಿಟ್ ಕಾರ್ಡ್ ಇಲ್ಲದೆ ಪರೀಕ್ಷಾ ಹಾಲ್‌ಗೆ ಎಂಟ್ರಿ ಇಲ್ಲ. Xerox ಕಾಪಿ ನಡೆಯಲ್ಲ, ಒರಿಜಿನಲ್ ಪ್ರಿಂಟ್‌ಔಟ್ ಬೇಕು.

3. ಪರೀಕ್ಷಾ ದಿನ ತಗೊಂಡು ಹೋಗಬೇಕಾದ 4 ವಸ್ತು


1. UGC NET Admit Card ಪ್ರಿಂಟ್‌ಔಟ್ — ಕಡ್ಡಾಯ

2. ಒರಿಜಿನಲ್ ಫೋಟೋ ID ಪ್ರೂಫ್ — ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ಡ್ರೈವಿಂಗ್ ಲೈಸೆನ್ಸ್/ವೋಟರ್ ID

3. ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ — ಅರ್ಜಿಯಲ್ಲಿ ಅಪ್‌ಲೋಡ್ ಮಾಡಿದ್ದೇ

4. ನೀಲಿ/ಕಪ್ಪು ಬಾಲ್ ಪಾಯಿಂಟ್ ಪೆನ್


ತಗೊಂಡು ಹೋಗಬಾರದ್ದು : ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಯಾವುದೇ ಪೇಪರ್.


4. UGC NET June 2026: ಮುಖ್ಯ ಸೂಚನೆ

1. ಪರೀಕ್ಷಾ ಸಮಯ : Paper 1 — 1 ಗಂಟೆ, Paper 2 — 2 ಗಂಟೆ. ನೆಗೆಟಿವ್ ಮಾರ್ಕಿಂಗ್ ಇಲ್ಲ.

2. ಡ್ರೆಸ್ ಕೋಡ್ : ಸಿಂಪಲ್ ಡ್ರೆಸ್. ಮೆಟಲ್ ಬಟನ್, ದೊಡ್ಡ ಬಕ್ಕಲ್ ಇರೋ ಬೆಲ್ಟ್ ಬೇಡ.

3. Reporting Time : ಅಡ್ಮಿಟ್ ಕಾರ್ಡ್‌ನಲ್ಲಿ ನಮೂದಿಸಿದ ಸಮಯಕ್ಕಿಂತ 1 ಗಂಟೆ ಮೊದಲೇ ಸೆಂಟರ್ ತಲುಪಿ. ಗೇಟ್ ಕ್ಲೋಸ್ ಆದ್ಮೇಲೆ ಎಂಟ್ರಿ ಇಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Digital Attendance Rules: ಶಾಲಾ ಶಿಕ್ಷಕರಿಗೆ ತಲೆನೋವಾದ ಡಿಜಿಟಲ್ ಹಾಜರಾತಿ! ಲೋಕೇಶನ್, ಫೇಸ್ ರೀಡಿಂಗ್ ರೂಲ್ಸ್‌ನಿಂದ ಗ್ರಾಮೀಣ ಶಿಕ್ಷಕರು ಫಜೀತಿ!

ಕರ್ನಾಟಕ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ 2026 - 2027 : ವೇಳಾಪಟ್ಟಿ ಪ್ರಕಟ

Karnataka Education Department Rules: ಪಿಯು ಉಪನ್ಯಾಸಕರಿಗೆ ಬಿಗ್ ಶಾಕ್! ಇನ್ನು ಮುಂದೆ 9 ಮತ್ತು 10ನೇ ತರಗತಿಗೂ ಬೋಧನೆ ಕಡ್ಡಾಯ; ಸರ್ಕಾರದ ಹೊಸ ನಿಯಮಕ್ಕೆ ತೀವ್ರ ವಿರೋಧ!