GST ಸಂಗ್ರಹ ಮೇ ತಿಂಗಳಲ್ಲಿ ₹ 1.94 ಲಕ್ಷ ಕೋಟಿ: ಸಾರ್ವಕಾಲಿಕ ದಾಖಲೆ, 3.2 ರಷ್ಟು ಏರಿಕೆ

 

ಭಾರತದ ಆರ್ಥಿಕ ವಲಯದಿಂದ ಮತ್ತೊಂದು ಅತ್ಯಂತ ಆಶಾದಾಯಕ ಮತ್ತು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ದೇಶದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು ಪ್ರಸಕ್ತ ವರ್ಷದ ಮೇ ತಿಂಗಳಿನಲ್ಲಿ ದಾಖಲೆ ಮಟ್ಟದ ಏರಿಕೆಯನ್ನು ಕಾಣುವ ಮೂಲಕ ಭಾರತದ ಆರ್ಥಿಕ ಸ್ಥಿರತೆಯನ್ನು ಜಗತ್ತಿಗೆ ಸಾರಿದೆ.

ಕೇಂದ್ರ ಹಣಕಾಸು ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ಮೇ 2026 ರ ಅವಧಿಯಲ್ಲಿ ಭಾರತದ ಒಟ್ಟು ಜಿಎಸ್‌ಟಿ ಆದಾಯವು ₹1.94 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ. ಈ ಭಾರಿ ಪ್ರಮಾಣದ ತೆರಿಗೆ ಸಂಗ್ರಹವು ದೇಶದ ಆರ್ಥಿಕತೆ ಎಷ್ಟು ಸದೃಢವಾಗಿ ಮುನ್ನಡೆಯುತ್ತಿದೆ ಮತ್ತು ಮಾರುಕಟ್ಟೆಯಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯ ಹೇಗೆ ಹೆಚ್ಚುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಮೇ 2026 ರಲ್ಲಿ ಭಾರತ GST ಸಂಗ್ರಹ ₹1.94 ಲಕ್ಷ ಕೋಟಿ ತಲುಪಿ ಹೊಸ ದಾಖಲೆ ಬರೆದಿದೆ.ಕಳೆದ ವರ್ಷ ಇದೆ ತಿಂಗಳಿಗೆ ಹೋಲಿಸಿದರೆ 3.2% ರಷ್ಟು ಪ್ರಗತಿ ಕಂಡಿದೆ. ದೇಶಿಯ ವಹಿವಾಟುಗಳ ಸ್ಥಿರತೆ ಮತ್ತು ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಳ ಇದಕ್ಕೆ ಪ್ರಮುಖ ಕಾರಣ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಶೇಕಡಾ 3.2 ರಷ್ಟು ಭರ್ಜರಿ ಪ್ರಗತಿ! (3.2% Growth in GST Revenue)
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿಯ ಜಿಎಸ್‌ಟಿ ಸಂಗ್ರಹಣೆಯಲ್ಲಿ ಶೇಕಡಾ 3.2 ರಷ್ಟು ಗಣನೀಯ ಪ್ರಗತಿ ದಾಖಲಾಗಿದೆ. ದೇಶದ ನಿವ್ವಳ ಜಿಎಸ್‌ಟಿ ಆದಾಯದಲ್ಲೂ (Net GST Revenue) ಗಮನಾರ್ಹ ಏರಿಕೆ ಕಂಡುಬಂದಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳುಗಳಲ್ಲೇ ಒಟ್ಟು ಜಿಎಸ್‌ಟಿ ಸಂಗ್ರಹವು ಅತ್ಯಂತ ಆಶಾದಾಯಕ ಆರಂಭವನ್ನು ಪಡೆದುಕೊಂಡಿದೆ.
GST ಸಂಗ್ರಹ 2026: ಮುಖ್ಯ ಅಂಶಗಳು 
ವಿವರ -- ಮೇ 2026 GST ಸಂಗ್ರಹ  / ಮಾಹಿತಿ -- ₹1,94,000 ಕೋಟಿ 
ವಿವರ -- ವಾರ್ಷಿಕ ಬೆಳವಣಿಗೆ  /  3.2% ಏರಿಕೆ 
ವಿವರ -- ಕಳೆದ ವರ್ಷ ಮೇ 2025  /  ₹1.88 ಲಕ್ಷ ಕೋಟಿ 
ವಿವರ --ಸತತ 3 ನೇ ತಿಂಗಳು  /  ₹1.8 ಲಕ್ಷ ಕೋಟಿ ಗಿಂತ ಹೆಚ್ಚು ಸಂಗ್ರಹ 
ವಿವರ -- ಪ್ರಮುಖ ಕಾರಣ  /  ದೇಶಿಯ ಬಳಕೆ ಹೆಚ್ಚಳ, ಕಂಪ್ಲೈನ್ಸ್ ಬಿಗಿ.
1. ₹1.94 ಲಕ್ಷ ಕೋಟಿ GST ಸಂಗ್ರಹ - ಯಾಕೆ ಮುಖ್ಯ?
1. ಆರ್ಥಿಕ ಚೇತರಿಕೆ : ಜನರು ಜೇಬಿನಲ್ಲಿ ದುಡ್ಡಿದೆ,ಖರೀದಿ ಜಾಸ್ತಿ ಆಗಿದೆ ಅಂತ ಅರ್ಥ. ಕಾರು, ಮೊಬೈಲ್, ಮನೆ ಸಾಮಾನು ಮಾರಾಟ ಜೋರಾಗಿದೆ.
2. ಸರ್ಕಾರಕ್ಕೆ ಹೆಚ್ಚು ದುಡ್ಡು : GST ಜಾಸ್ತಿ ಬಂದಷ್ಟು ಸರ್ಕಾರಕ್ಕೆ ರಸ್ತೆ ಸ್ಕಿಮ್, ಸಂಬಳ ಕೊಡೋಕೆ ದುಡ್ಡು ಸಿಗುತ್ತೆ. 
3. ಟ್ಯಾಕ್ಸ್ ಕಳ್ಳತನ ಕಡಿಮೆ : E- invoice, E- way ಬಿಲ್ ನಿಂದ ಬಿಸಿನೆಸ್ ತಪ್ಪಿಸಿ ಕೊಳ್ಳೋಕೆ ಆಗಲ್ಲ. 
2. ಯಾವ ರಾಜ್ಯದಿಂದ ಎಷ್ಟು GST ಬಂತು? 
ಮೇ 2026 ರಲ್ಲಿ ಅತಿ ಹೆಚ್ಚು GST ಸಂಗ್ರಹ ಮಾಡಿದ ಟಾಪ್ 5 ರಾಜ್ಯಗಳು:
1. ಮಹಾರಾಷ್ಟ್ರ: ₹28.500 ಕೋಟಿ
2. ಕರ್ನಾಟಕ : ₹14.200 ಕೋಟಿ
3. ಗುಜರಾತ್ : ₹11.800 ಕೋಟಿ
4. ತಮಿಳುನಾಡು : ₹11.200 ಕೋಟಿ
5. ಉತ್ತರ ಪ್ರದೇಶ : ₹9.800 ಕೋಟಿ
ಕರ್ನಾಟಕ 2 ನೇ ಸ್ಥಾನದಲ್ಲಿ ಇರೋದು ನಮ್ಮ ರಾಜ್ಯದ ಆರ್ಥಿಕ ಶಕ್ತಿಗೆ ಸಾಕ್ಷಿ.
3. ಸಾಮಾನ್ಯ ಜನರಿಗೆ ಇದರಿಂದ ಏನು ಲಾಭ?
ಡೈರೆಕ್ಟ್ ಲಾಭ ಇಲ್ಲ, ಆದರೆ ಇಂಡೈರೆಕ್ಟ್ ಲಾಸ್ಟ್ಭ ಇದೆ:
1. ಹೊಸ ಸ್ಕಿನ್ : GST ದುಡ್ಡು ಜಾಸ್ತಿ ಆದರೆ ಗೃಹಲಕ್ಷ್ಮಿ ಥರ ಸ್ಕೀಮ್ ಗೆ ಹಣ ಕೊರತೆ ಆಗಲ್ಲ.
2. ಟ್ಯಾಕ್ಸ್ ರೇಟ್ ಕಡಿಮೆ : ಸಂಗ್ರಹ ಜಾಸ್ತಿ ಆದರೆ ಮುಂದೆ ಕೆಲವು ವಸ್ತುಗಳ GST 18% ರಿಂದ 12% ಗೆ ಇಳಿಸಬಹುದು.
3. ಉದ್ಯೋಗ ಸೃಷ್ಟಿ : ಸರ್ಕಾರಕ್ಕೆ ದುಡ್ಡು ಬಂದ್ರೆ ಹೊಸ ಪ್ರಾಜೆಕ್ಟ್, ಹೊಸ ನೇಮಕಾತಿ ಶುರು ಆಗುತ್ತೆ. 
4. ಮುಂದಿನ 3 ತಿಂಗಳು GST ಹೇಗಿರುತ್ತೆ?
 ಹಣಕಾಸು ತಜ್ಞರ ಪ್ರಕಾರ ಜೂನ್ ಆಗಸ್ಟ್ 2026 ರಲ್ಲೂ GST ಸಂಗ್ರಹ ₹1.90 ಲಕ್ಷ ಕೋಟಿಗಿಂತ ಜಾಸ್ತಿ ಇರುತ್ತೆ. ಮಾನ್ಸೂನ್ ಚೆನ್ನಾಗಿದ್ದು, ಹಬ್ಬದ ಸೀಸನ್ ಶುರು ಆಗೋದ್ರಿಂದ ವ್ಯಾಪಾರ ಜೋರಾಗಿರುತ್ತೆ. 
⚠️ ಗಮನಿಸಿ : ನೀವು ಬಿಸಿನೆಸ್ ಮಾಡಿದರೆ GST ರಿಟರ್ನ್  ಟೈಮಿಗೆ ಪೈಲ್ ಮಾಡಿ. ಲೇಟ್ ಆದರೆ ದಿನಕ್ಕೆ ₹50 ಪೈನ್+ಬಡ್ಡಿ ಬೀಳುತ್ತೆ.
👉 ಹೆಚ್ಚಿನ ಮಾಹಿತಿಗಾಗಿ ಅಧಿಕೃತ GST ಪೋರ್ಟಲ್ gst.gov.in 
ಮೇ ತಿಂಗಳ ಜಿಎಸ್‌ಟಿ ಸಂಗ್ರಹದ ಈ 1.94 ಲಕ್ಷ ಕೋಟಿ ರೂಪಾಯಿಗಳ ಅಂಕಿ-ಅಂಶವು ಭಾರತೀಯ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಮಂದಗತಿಯ ಆತಂಕಗಳಿದ್ದರೂ, ಭಾರತದ ಆಂತರಿಕ ಮಾರುಕಟ್ಟೆ ಮತ್ತು ದೇಶೀಯ ವಹಿವಾಟುಗಳು ಅತ್ಯಂತ ಪ್ರಬಲವಾಗಿವೆ ಎಂಬುದು ಇದರಿಂದ ಸಾಬೀತಾಗಿದೆ.
ಭಾರತದ ಈ ಆರ್ಥಿಕ ಬೆಳವಣಿಗೆ ಮತ್ತು ಜಿಎಸ್‌ಟಿ ಸಂಗ್ರಹದ ದಾಖಲೆಯ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಬಾಕ್ಸ್‌ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!