Digital Attendance Rules: ಶಾಲಾ ಶಿಕ್ಷಕರಿಗೆ ತಲೆನೋವಾದ ಡಿಜಿಟಲ್ ಹಾಜರಾತಿ! ಲೋಕೇಶನ್, ಫೇಸ್ ರೀಡಿಂಗ್ ರೂಲ್ಸ್‌ನಿಂದ ಗ್ರಾಮೀಣ ಶಿಕ್ಷಕರು ಫಜೀತಿ!


 ಸರ್ಕಾರಿ ಶಾಲಾ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ ಶಾಕ್ : ತಡವಾಗಿ ಬಂದ್ರೆ ಸಂಬಳ ಕಟ್!

ಕರ್ನಾಟಕ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧಾರಿತ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿದೆ. ಶಿಕ್ಷಕರು ಸಮಯಕ್ಕೆ  ಸರಿಯಾಗಿ ಶಾಲೆಗೆ ಬರದಿದ್ದರೆ," ಚಕ್ಕರ್ " ಹೊಡೆದರೆ ಸಂಬಳದಲ್ಲಿ ಕಡಿತ ಆಗುತ್ತದೆ. ಇದರಿಂದ ಗ್ರಾಮೀಣ ಭಾಗದ ಶಿಕ್ಷಕರಿಗೆ ದೊಡ್ಡ ತಲೆ ನೋವು ಶುರುವಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಶಿಸ್ತು ತರಲು ಶಿಕ್ಷಣ ಇಲಾಖೆಯು ತಂತ್ರಜ್ಞಾನದ ಮೊರೆ ಹೋಗಿದೆ. ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ಹೊಸದಾಗಿ ಡಿಜಿಟಲ್ ಹಾಜರಾತಿ (Digital Attendance) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

ಡಿಜಿಟಲ್ ಹಾಜರಾತಿ ಜಾರಿಗೆ ತರಲು ಕಾರಣವೇನು? (Why Digital Attendance?)

ಕೆಲವು ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ನಾನಾ ಕಾರಣಗಳನ್ನು ಒಡ್ಡಿ ಶಾಲೆಗೆ ತಡವಾಗಿ ಬರುವುದು, ಇಲ್ಲವೇ ಬಾರದೇ ಚಕ್ಕರ್ ಹೊಡೆಯುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇದಕ್ಕೆ ಶಾಶ್ವತ ಬ್ರೇಕ್ ಹಾಕಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಹಳೆಯ ಮ್ಯಾನುಯಲ್ ರಿಜಿಸ್ಟರ್ ಸಹಿ ಪದ್ಧತಿಯನ್ನು ಕೈಬಿಟ್ಟು, ಮೊಬೈಲ್ ಆಪ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆಯನ್ನು ತರಲಾಗಿದೆ. ಇದರ ಅಡಿಯಲ್ಲಿ ಶಿಕ್ಷಕರು ಶಾಲಾ ಆವರಣದ ಒಳಗೇ ನಿಂತು ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ (Face Recognition) ಹಾಜರಾತಿ ದಾಖಲಿಸಬೇಕಾಗುತ್ತದೆ.

ಡಿಜಿಟಲ್ ಹಾಜರಾತಿ 2026 : ಹೊಸ ರೂಲ್ಸ್ ಏನು ?

1. ಹಾಜರತಿ ವಿಧಾನ : ಮೊಬೈಲ್ ಆ್ಯಪ್ + GPS ಲೊಕೇಶನ್ + ಫೇಸ್ ಸ್ಕ್ಯಾನ್.

2. ಸಮಯ : ಬೆಳಗ್ಗೆ 9 : 30 ಕ್ಕೆ ಶಾಲೆಯ 100 ಮೀಟರ್ ಒಳಗೆ ಇರಬೇಕು.

3. ಲೇಟ್ ಆದರೆ : 3 ದಿನ ಲೇಟ್ = 1 ದಿನಾ CL ಕಟ್.

4. ಚಕ್ಕರ್ ಹೊಡೆದರೆ : GPS ಟ್ರ್ಯಾಕ್ ಆಗುತ್ತೆ. ಸಂಬಳ ಕಟ್.

5. ಜಾರಿ : ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು. 

6. ಆ್ಯಪ್ ಹೆಸರು : ಶಿಕ್ಷಕ ಮಿತ್ರ ಆ್ಯಪ್ ( shikshaka mithra app)

1. ಶಿಕ್ಷಕರಿಗೆ ಯಾಕೆ ಪಜೀತಿ? 3 ದೊಡ್ಡ ಸಮಸ್ಯೆ. 

ಸಮಸ್ಯ 1 : ನೆಟ್ ವರ್ಕ್ ಇಲ್ಲ

ಗ್ರಾಮೀಣ ಶಾಲೆಗಳಲ್ಲಿ ನೆಟ್ ಇಲ್ಲ,2G  ಮಾತ್ರ. ಬೆಟ್ಟ, ಕಾಡು,ಪ್ರದೇಶದ ಶಾಲೆಗಳಲ್ಲಿ GPS ಸಿಗಲ್ಲ. ಫೋಟೋ ಅಪ್ಲೋಡ್ ಆಗಲ್ಲ. ಹಾಜರಾತಿ ಮಿಸ್ ಆದರೆ ಸಂಬಳ ಕಟ್.

ಸಮಸ್ಯ 2 : ಬಸ್ / ವಾಹನ ವ್ಯವಸ್ಥೆ ಇಲ್ಲ

ಚಾಮರಾಜನಗರ, ಉತ್ತರ ಕನ್ನಡದ ಹಲವು ಶಾಲೆಗಳಿಗೆ ಬಸ್ ಇಲ್ಲ. ಶಿಕ್ಷಕರು 10 - 15 ಕಿಮೀ ನಡೆದುಕೊಂಡು ಹೋಗಬೇಕು. ಮಳೆಗಾಲದಲ್ಲಿ 9:30 ಕ್ಕೆ ತಲುಪಿಕೆ ಆಗಲ್ಲ.

ಸಮಸ್ಯ 3 : ಮೊಬೈಲ್ ಸಮಸ್ಯ

ಹಲವು ಹಿರಿಯ ಶಿಕ್ಷಕರ ಬಳಿ ಸ್ಮಾರ್ಟ್ ಫೋನ್ ಇಲ್ಲ. ಇದ್ದರು ಕ್ಯಾಮೆರಾ ಕೆಟ್ಟಿದೆ, ಸ್ಟೋರೇಜ್ ಫುಲ್ ಆಗಿದೆ. ಫೇಸ್ ಸ್ಕ್ಯಾನ್ ಫೇಲ್ ಆದರೆ ಯಾರು ಹೊಣೆ?

2. ಶಿಕ್ಷಣ ಇಲಾಖೆ ಯಾಕೆ ಈ ರೂಲ್ಸ್ ತಂದಿದೆ. 

1 : ಚಕ್ಕರ್ ಕಂಟ್ರೋಲ್ : ಕೆಲ ಶಿಕ್ಷಕರು ಹಾಜರಾತಿ ಹಾಕಿ ಬೇರೆ ಕಡೆ ಟ್ಯೂಷನ್, ಬಿಸಿನೆಸ್ ಮಾಡ್ತಿದ್ರು. 

2. ಗುಣಮಟ್ಟ ಹೆಚ್ಚಳ : ಶಿಕ್ಷಕರು ಸಮಯಕ್ಕೆ ಬಂದ್ರೆ ಮಕ್ಕಳ ಕಲಿಕೆ ಚೆನ್ನಾಗಿರುತ್ತೆ. 

3. ಪಾರದರ್ಶಕತೆ : ಯಾರು ಇಷ್ಟು ದಿನ ಬಂದ್ರು ಅಂತ ಡಿಜಿಟಲ್ ರೆಕಾರ್ಡ್ ಸಿಗುತ್ತೆ. 

3. ಶಿಕ್ಷಕ ಸಂಘಗಳ ಆಕ್ರೋಶ : " ಮೊದಲು ಮೂಲಭೂತ ಸೌಕರ್ಯ ಕೊಡಿ"

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೇಳೋದೇನು : 

1. ಶಾಲೆಗೆ ರಸ್ತೆ , ಬಸ್ ವ್ಯವಸ್ಥೆ ಮಾಡಿ, ಆಮೇಲೆ ಹಾಜರಾತಿ ಕೇಳಿ.

2. ನೆಟ್ವರ್ಕ್ ಬೂಸ್ಟರ್ ಎಲ್ಲಾ ಶಾಲೆಗೂ ಕೊಡಿ.

3. ತುರ್ತು ಕೆಲಸ , ಮೆಡಿಕಲ್ ಎಮರ್ಜೆನ್ಸಿಗೆ ರಿಲ್ಯಾಕ್ಷೇಶನ್  ಕೊಡಿ.

4. ಮೊಬೈಲ್ ಭತ್ಯೆ ₹500 ಕೊಡಿ, ಡೇಟಾ ಖರ್ಚು ನಾವೇ ಭರಿಸಿದಾ?

4. ಪೇರೆಂಟ್ಸ್ ಗೆ ಇದರಿಂದ ಏನು ಲಾಭ?

1. ಶಿಕ್ಷಕರು ರೆಗ್ಯುಲರ್ ಬರ್ತಾರೆ : ಮಕ್ಕಳ ಪಾಠ ಮಿಸ್ ಆಗಲ್ಲ.

2. ಮಿಡ್ ಡೇ ಮೀಲ್ಸ್ : ಅಡುಗೆ ಸಿಬ್ಬಂದಿ ಹಾಜರಾತಿ ಕೂಡ ಟ್ರ್ಯಾಕ್ ಆಗುತ್ತೆ.

3. ದೂರು ಕೊಡಬಹುದು : ಶಿಕ್ಷಕರು ಬರದಿದ್ದರೆ 112 ಸಹಾಯವಾಣಿ ಗೆ ಕಾಲ್ ಮಾಡಿ.

⚠️ಶಿಕ್ಷಕ ಮಿತ್ರ ಆ್ಯಪ್ ( shikshaka mithra app ) ನಲ್ಲಿ ಆಫ್ ಲೈನ್ ಹಾಜರಾತಿ ಆಪ್ಷನ್ ಇದೇ.ನೆಟ್ ಬಂದಾಗ ಆಟೋ ಸಿಂಕ್ ಆಗುತ್ತೆ.ಆದರೆ 9 : 30 ರಿಂದ 10:00AM  ಒಳಗೆ ಸಿಂಕ್ ಆಗಬೇಕು.

👉ದೂರು ನೀಡಲು : ಶಿಕ್ಷಣ ಇಲಾಖೆ ಸಹಾಯವಾಣಿ  080-2331 1234




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ 2026 - 2027 : ವೇಳಾಪಟ್ಟಿ ಪ್ರಕಟ

Karnataka Education Department Rules: ಪಿಯು ಉಪನ್ಯಾಸಕರಿಗೆ ಬಿಗ್ ಶಾಕ್! ಇನ್ನು ಮುಂದೆ 9 ಮತ್ತು 10ನೇ ತರಗತಿಗೂ ಬೋಧನೆ ಕಡ್ಡಾಯ; ಸರ್ಕಾರದ ಹೊಸ ನಿಯಮಕ್ಕೆ ತೀವ್ರ ವಿರೋಧ!