22 ನೇ IPS : ಅಭಿಜಿತ್ ಪಾಟೀಲ್ ಯಾರು?ಕೋಚಿಂಗ್ ಇಲ್ಲದೆ UPSC ಗೆದ್ದಿದ್ದು ಹೇಗೆ?
ಮಹಾರಾಷ್ಟ್ರದ ಅಭಿಜಿತ್ ಪಾಟೀಲ್ ಕೇವಲ 22ನೇ ವಯಸ್ಸಿನಲ್ಲಿ, ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿ IPS ಅಧಿಕಾರಿ ಆಗಿದ್ದಾರೆ.ಯಾವುದೇ ಕೋಚಿಂಗ್ ಇಲ್ಲದೆ, AIR 470 ರಾಂಕ್ ಪಡೆದು ದೇಶಕ್ಕೆ ಸ್ಪೂರ್ತಿಯಾಗಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಗೆದ್ದು ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಲಕ್ಷಾಂತರ ಯುವಕರು ದೆಹಲಿ, ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಹೋಗಿ, ಲಕ್ಷಗಟ್ಟಲೆ ಹಣ ಸುರಿದು ಕೋಚಿಂಗ್ ಪಡೆಯುತ್ತಾರೆ. ಆದರೂ ಹಲವರಿಗೆ ವರ್ಷಗಟ್ಟಲೆ ಪ್ರಯತ್ನಿಸಿದರೂ ಯಶಸ್ಸು ಸಿಗುವುದಿಲ್ಲ.
ಕೋಚಿಂಗ್ ಸೆಂಟರ್ ಮೆಟ್ಟಿಲು ಹತ್ತದೆ, ಕೇವಲ 22ನೇ ವಯಸ್ಸಿನಲ್ಲಿ, ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡಿ ಐಪಿಎಸ್ (IPS) ಅಧಿಕಾರಿಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಆ ಯುವ ಸಾಧಕನೇ ಅಭಿಜೀತ್ ಪಾಟೀಲ್. ಯುವ ಜನತೆಗೆ ಮಾದರಿಯಾಗಿರುವ ಇವರ ಯಶೋಗಾಥೆ ಇಲ್ಲಿದೆ.
ಯಾರು ಈ ಅಭಿಜೀತ್ ಪಾಟೀಲ್? (Who is Abhijit Patil?)
ಮಹಾರಾಷ್ಟ್ರ ಮೂಲದ ಅಭಿಜೀತ್ ಪಾಟೀಲ್ ಬಾಲ್ಯದಿಂದಲೂ ಅತ್ಯಂತ ಶಿಸ್ತುಬದ್ಧ ಮತ್ತು ಕಷ್ಟಪಟ್ಟು ಓದುವ ಸ್ವಭಾವದವರಾಗಿದ್ದರು. ದೇಶದ ಸೇವೆ ಮಾಡಬೇಕು, ಪೊಲೀಸ್ ಇಲಾಖೆಗೆ ಸೇರಿ ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದು ಇವರ ದೊಡ್ಡ ಕನಸಾಗಿತ್ತು. ಪದವಿ ಮುಗಿಯುತ್ತಿದ್ದಂತೆ 22ನೇ ವಯಸ್ಸಿನಲ್ಲೇ ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ನಿರ್ಧರಿಸಿದ ಇವರಿಗೆ ಎದುರಾಗಿದ್ದು ಕೋಚಿಂಗ್ ಸಂಸ್ಥೆಗಳ ಭಾರಿ ದರ. ಆದರೆ ಆರ್ಥಿಕ ಅಥವಾ ಇತರ ಕಾರಣಗಳಿಗಾಗಿ ಇವರು ದುಬಾರಿ ತರಬೇತಿಯನ್ನು ಪಡೆಯದಿರಲು ನಿರ್ಧರಿಸಿದರು.
IPS ಅಭಿಜಿತ್ ಪಾಟೀಲ್ : ಶಾರ್ಟ್ ಪ್ರೊಫೈಲ್
1. ಹೆಸರು : ಅಭಿಜಿತ್ ಪಾಟೀಲ್
2. ವಯಸ್ಸು : 22 ವರ್ಷ
3. ರಾಜ್ಯ : ಮಹಾರಾಷ್ಟ್ರ
4. UPSC ರ್ಯಾಂಕ್ : AIR 470
5. ಪ್ರಯತ್ನ : ಮೊದಲನೇ ಪ್ರಯತ್ನ
6. ಕೋಚಿಂಗ್ : ಸಂಪೂರ್ಣ ಸೆಲ್ಫ್ ಸ್ಟಡಿ
7. ಹುದ್ದೆ : IPS ಅಧಿಕಾರಿ
8. ಸ್ಟ್ರಾಟಜಿ : ಯೂಟ್ಯೂಬ್ + NCERT + ದಿನಪತ್ರಿಕೆ
* ಅಭಿಜಿತ್ UPSC ಗೆದ್ದಿದ್ದು ಹೇಗೆ? 3 ಸೀಕ್ರೆಟ್
ಸೀಕ್ರೆಟ್ 1 : ಕಟ್ಟು ನಿಟ್ಟಿನ ಶಿಸ್ತು
ದಿನಕ್ಕೆ 10 ರಿಂದ 12 ಗಂಟೆ ಓದ್ತಿದ್ರು . ಬೆಳಗ್ಗೆ ಐದಕ್ಕೆ ಎದ್ದು, ರಾತ್ರಿ 11 ಕ್ಕೆ ಮಲಗು ರೊಟೀನ್. ಮೊಬೈಲ್, ಸೋಶಿಯಲ್ ಮೀಡಿಯಾ 1 ವರ್ಷ ಬ್ಯಾನ್ ಮಾಡಿದ್ರಂತೆ.
ಸೀಕ್ರೆಟ್ 2 : ಉಚಿತ ಸಂಪನ್ಮೂಲ
. NCERT : 6 ರಿಂದ 12 ನೇ ಕ್ಲಾಸ್ ಪುಸ್ತಕಗಳೇ ಬೇಸ್
. ಯೂಟ್ಯೂಬ್ : Mrunal Patel,study IQ ಚಾನಲ್ ನಿಂದ ಇಕಾನಮಿ, ಪಾಲಿಟಿ ಕಲಿತರು.
. ದಿನಪತ್ರಿಕೆ : The hindu + ಕನ್ನಡಪ್ರಭ ದಿನಾ ಓದಿ ನೋಟ್ಸ್ ಮಾಡಿದ್ರು.
. ಸೀಕ್ರೆಟ್ 3 : ಸ್ಮಾರ್ಟ್ ವರ್ಕ್
ಕೊಂಚಿಂಗ್ ನೋಟ್ಸ್ ಗಾಗಿ ಲಕ್ಷ ಖರ್ಚು ಮಾಡಿಲ್ಲ. ಪಿರಮಿಡ್ ರಿವಿಷನ್ ಮಾಡ್ತಿದ್ರು. - ಒಂದೇ ಟಾಪಿಕ್ 1 ದಿನ, 7 ದಿನ, 30 ದಿನದ ನಂತರ ರಿಪೀಟ್.
2. ದುಬಾರಿಬ ಕೋಚಿಂಗ್ ಇಲ್ಲದೆ UPSE ಗೆಲ್ಲಬಹುದು" - ಅಭಿಜಿತ್ ಮಂತ್ರ
"ನನಗೆ ಕೋಚಿಂಗ್ ಗೆ ಹೋಗೋಕೆ ದುಡ್ಡು ಇರಲಿಲ್ಲ. ಆದರೆ ಯೂಟ್ಯೂಬ್ ಯೂನಿವರ್ಸಿಟಿ ಇತ್ತು. ಇಂಟರ್ನೆಟ್ ಇದ್ದರೆ ಸಾಕು. ಗೂಗಲ್ ನಲ್ಲಿ ಗುರು ಸಿಕ್ತಾರೆ" ಅಂತ ಅಭಿಜಿತ್ ಹೇಳಿದ್ದಾರೆ.
ಮಧ್ಯಮ ವರ್ಗದ ಹುಡುಗರಿಗೆ ಇವರ 3 ಸಲಹೆ :
1. NCERT ಬಿಟ್ಟು ಬೇರೆ ಪುಸ್ತಕ ಮುಟ್ಟಬೇಡಿ - ಮೊದಲು ಬೇಸ್ ಸ್ಟ್ರಾಂಗ್ ಮಾಡಿ.
2. ಮಾಕ್ ಟೆಸ್ಟ್ ತಿಂಗಳಿಗೆ 4 ಫುಲ್ ಟೆಸ್ಟ್ ಬರೆಯಿರಿ. ತಪ್ಪಿಂದ ಕಲಿಯರಿ
3. ಉತ್ತರ ಬರೆಯೋ ಅಭ್ಯಾಸ : ದಿನಕ್ಕೆ 2 ಪ್ರಶ್ನೆ 7 ನಿಮಿಷದಲ್ಲಿ ಬರೆಯಿರಿ.
3. 22 ನೇ ವಯಸ್ಸಿಗೆ IPS - ಸಂಬಳ ಎಷ್ಟು? ಪವರ್ ಏನು
. ಆರಂಭಿಕ ಸಂಬಳ : ₹56.100/ತಿಂಗಳು + DA , HRA
. ಸೌಲಭ್ಯ : ಸರ್ಕಾರಿ ಬಂಗಲೆ, ಕಾರು, ಭದ್ರತೆ, ವೈದ್ಯಕೀಯ.
. ಪವರ್ : SP ಆಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಜವಾಬ್ದಾರಿ.
. ಪ್ರಮೋಷನ್ : 16 ವರ್ಷದಲ್ಲಿ IG, 25 ವರ್ಷದಲ್ಲಿ DGP ಆಗಬಹುದು.
4. ಕರ್ನಾಟಕದ ಹುಡುಗರಿಗೆ ಪಾಠ ಏನು?
. ಅಭಿಜಿತ್ ಕಡೆಯಿಂದ ಮೂರು ಪಾಠ :
1. ವಯಸ್ಸು ಮುಖ್ಯ ಅಲ್ಲ : 22ಕ್ಕೇ IPS ಆಗಬಹುದು.21 - 32 ವರ್ಷ UPSC ವಯೋಮಿತಿ .
2. ಹಳ್ಳಿ ಹುಡುಗನು ಗೆಲ್ಲಬಹುದು : ಕನ್ನಡ ಮೀಡಿಯಂ ನಲ್ಲಿ ಓದಿದ್ರು IAS/IPS ಆಗಬಹುದು.
3. ದುಡ್ಡಿಲ್ಲ ಅನ್ನೋ ನೆಪಬೇಡ : ಮೊಬೈಲ್ + ಇಂಟರ್ನೆಟ್ ಇದ್ದರೆ ಸಾಕು.
⚠️ ಫೇಕ್ ಕೋಚಿಂಗ್ ಅಲರ್ಟ್ : "100% ಗ್ಯಾರಂಟಿ,1 ತಿಂಗಳಿನಲ್ಲಿ IPS" ಅಂತ ಯಾಮಾರಿಸೋ ಕೋಚಿಂಗ್ ಸೆಂಟರ್ ಗೆ ಹೋಗಬೇಡಿ. ಅಭಿಜಿತ್ ತರ ಸೆಲ್ಫ್ ಸ್ಟಡಿ ಮಾಡಿ.
👉 UPSC ಅಧಿಕೃತ ಸೈಟ್ . Upac.gov.in
ಮುಕ್ತಾಯ (Conclusion)
ಕೇವಲ 22ನೇ ವಯಸ್ಸಿಗೆ ಐಪಿಎಸ್ ಅಧಿಕಾರಿಯಾಗಿ ದೇಶ ಸೇವೆಗೆ ನಿಂತಿರುವ ಮಹಾರಾಷ್ಟ್ರದ ಈ ಯುವ ಸಿಂಗಂಗೆ ಇಡೀ ದೇಶವೇ ಸಲಾಂ ಎನ್ನುತ್ತಿದೆ. ಯುವ ಸಮಾಜಕ್ಕೆ ಇವರ ಕಥೆ ಮಾದರಿಯಾಗಲಿ.
ದುಬಾರಿ ಕೋಚಿಂಗ್ ಸೆಂಟರ್‌ಗಳ ಹಾವಳಿ ಇರುವ ಈ ದಿನಗಳಲ್ಲಿ, ಸ್ವಯಂ ಅಧ್ಯಯನದ ಮೂಲಕ ಐಪಿಎಸ್ ಆದ ಅಭಿಜೀತ್ ಅವರ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮತ್ತು ನಿಮ್ಮ ಪರಿಚಯದ ಉದ್ಯೋಗಾಕಾಂಕ್ಷಿಗಳಿಗೆ ಈ ಲೇಖನವನ್ನು ಶೇರ್ ಮಾಡಿ ಪ್ರೇರೇಪಿಸಿ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ