ಕರ್ನಾಟಕ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ 2026 - 2027 : ವೇಳಾಪಟ್ಟಿ ಪ್ರಕಟ

 

ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಕರಾಗಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಶಿಕ್ಷಣ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿಗಾಗಿ ಖಾಲಿ ಇರುವ ಅತಿಥಿ ಉಪನ್ಯಾಸಕರ (Guest Faculty) ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ನೇಮಕಾತಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ  2026-2027ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕಾತಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಡಿಗ್ರಿ, ಪಿಯುಸಿ ಕಾಲೇಜುಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಜೂನ್ 21ರಿಂದ ಅರ್ಜಿ ಶುರು.

ಅತಿಥಿ ಉಪನ್ಯಾಸಕ ನೇಮಕಾತಿ 2026: ಮುಖ್ಯ ದಿನಾಂಕಗಳು.

1. ಆನ್ಲೈನ್ ಅರ್ಜಿ ಶುರು : 21 ಜೂನ್ 2026 

2. ಅರ್ಜಿ ಕೊನೆಯ ದಿನ : 27 ಜೂನ್ 2026 

3. ತಾತ್ಕಾಲಿಕ ಮೆರಿಟ್ ಪಟ್ಟಿ : 28 ಜೂನ್ 2026

4. ಆಕ್ಷೇಪಣೆ ಸಲ್ಲಿಕೆ : 29 - 30 ಜೂನ್ 2026 

5. ಕಾರ್ಯಭಾರ ವಹಿಸಿಕೊಳ್ಳುವುದು : 1 ಜುಲೈ 2026 

6. ಆನ್ಲೈನ್ ಕೌನ್ಸಿಲಿಂಗ್ : 7 ಜುಲೈ 2026 ರಿಂದ 

1 : ಯಾರು ಅರ್ಜಿ ಹಾಕಬಹುದು? ಅರ್ಹತೆ ಏನು?

1. ವಿದ್ಯಾರ್ಹತೆ  : ಸ್ನಾತಕೋತ್ತರ ಪದವಿ 55% ಅಂಕ + NET/SLET/Phd.

2. ವಯೋಮಿತಿ : ಗರಿಷ್ಠ 40 ವರ್ಷ.SC/ST/OBC ಗೆ 5 ವರ್ಷ ರಿಯಾಯಿತಿ. 

3. ಅನುಭ  : ಬೇಕಿಲ್ಲ ಫ್ರೇಶರ್ಸ್  ಅರ್ಜೆ ಹಾಕಬಹುದು. 

4. ಮೀಸಲಾತಿ :  ರೋಸ್ಟರ್ ಪ್ರಕಾರ SC/ST/OBC/ಮಹಿಳೆ/ಗ್ರಾಮೀಣ.

⚠️ ಮುಖ್ಯ : NET/SLET ಇಲ್ಲದಿದ್ದರೂ ಅರ್ಜಿ ಹಾಕಬಹುದು. ಆದರೆ NET  ಇದ್ದವರಿಗೆ ಮೊದಲ ಆದ್ಯತೆ. Phd ಇದ್ದರೆ NET ವಿನಾಯಿತೆ ಇದೆ. 

2. ಸಂಬಳ ಎಷ್ಟು? ಗಂಟೆಗೆ ದುಡ್ಡು ಕೊಡ್ತಾರಾ?

ಹೊಸ 2026 ಪರಿಷ್ಕೃತ ವೇತನ : 

1. UG ಕಾಲೇಜು : ಗಂಟೆಗೆ ₹600 - ತಿಂಗಳಿಗೆ ₹28.000 ದಿಂದ ₹32.000.

2. PG ಕಾಲೇಜು : ಗಂಟೆಗೆ ₹700 - ತಿಂಗಳಿಗೆ ₹32.000 ದಿಂದ ₹38.000.

3.  ಗರಿಷ್ಠ ಗಂಟೆ : ವಾರಕ್ಕೆ 15 ಗಂಟೆ, ತಿಂಗಳಿಗೆ 60 ಗಂಟೆ.

ಇತರೆ ಸೌಲಭ್ಯ : CL 12 ದಿನ, ಮೆಟರ್ನಿಟಿ ನ್ಯೂ ಇದೆ. DA, HRA  ಇಲ್ಲ .

3. ಅರ್ಜಿ ಸಲ್ಲಿಸುವುದು ಹೇಗೆ? ಡೈರೆಕ್ಟ್ ಲಿಂಕ್

ಸ್ಟೆಪ್ 1 : dhe.karnataka.gov.in ಗೆ ಹೋಗಿ.

ಸ್ಟೆಪ್ 2 : "guest faculty recruitment 2026-27" ಲಿಂಕ್ ಕ್ಲಿಕ್ ಮಾಡಿ.

ಸ್ಟೆಪ್ 3 : ಮೊಬೈಲ್ ನಂಬರ್ ಹಾಕಿ OTP ಮೂಲಕ ರಿಜಿಸ್ಟರ್ ಆಗಿ.

ಸ್ಟೆಪ್ 4 : ವಿದ್ಯಾರ್ಹತೆ, ದಾಖಲೆ ಅಪ್ಲೋಡ್ ಮಾಡಿ. 

ಸ್ಟೆಪ್ 5 : ಶುಲ್ಕ ಇಲ್ಲ. ಉಚಿತವಾಗಿ ಸಬ್ಮಿಟ್ ಮಾಡಿ.

ಬೇಕಾಗುವ ದಾಖಲೆ : SSLC,PUC, ಡಿಗ್ರಿ, PG ಮಾರ್ಕ್ಸ್ ಕಾರ್ಡ್, NET/SLET ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ, ಆಧಾರ್. 

ಅರ್ಜಿ ಸಲ್ಲಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು:

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ತಮ್ಮ ಶೈಕ್ಷಣಿಕ ದಾಖಲೆಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಬೋಧನಾ ಅನುಭವದ ಪ್ರಮಾಣಪತ್ರಗಳನ್ನು ನಿಖರವಾಗಿ ಅಪ್‌ಲೋಡ್ ಮಾಡಬೇಕು. ತಪ್ಪು ಮಾಹಿತಿ ನೀಡಿದರೆ ಜೂನ್ 28 ಕ್ಕೆ ಪ್ರಕಟವಾಗುವ ತಾತ್ಕಾಲಿಕ ಮೆರಿಟ್ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಡಲಾಗುವ ಸಾಧ್ಯತೆ ಇರುತ್ತದೆ. ಯಾವುದೇ ತಿದ್ದುಪಡಿಗಳಿದ್ದರೂ ಜೂನ್ 29-30 ರೊಳಗೇ ಸರಿಪಡಿಸಿಕೊಳ್ಳಬೇಕು.

4. ಆಯ್ಕೆ ಹೇಗೆ? ಮೆರಿಟ್ ಹೇಗೆ ಲೆಕ್ಕ ಹಾಕ್ತಾರೆ? 

100 ಅಂಕಗಳಿಗೆ ಮೆರಿಟ್ :

1. PG ಅಂಕ : 40 ಅಂಕ 

2. NET/SLET/Phd : 30 ಅಂಕ - Phd=30, NET = 25, SLET = 20,

3. ಬೋಧನ ಅನುಭವ : 20 ಅಂಕ - ಪ್ರತಿ ವರ್ಷಕ್ಕೆ 2 ಅಂಕ.

4. ಸಂದರ್ಶನ : 10 ಅಂಕ.

ಟೈ ಬ್ರೇಕರ್ : ವಯಸ್ಸು ಜಾಸ್ತಿ ಇದ್ದವರಿಗೆ ಆದ್ಯತೆ. 

👉 ಅಧಿಕೃತ ವೆಬ್ ಸೈಟ್ :

dhe.karnataka.gov.in 

ಮುಕ್ತಾಯ (Conclusion)

ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಬೋಧನಾ ವೃತ್ತಿ ಮಾಡಲು ಕಾಯುತ್ತಿದ್ದ ನಿರುದ್ಯೋಗಿ ಪದವೀಧರರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಜೂನ್ 21 ರಿಂದಲೇ ವೆಬ್‌ಸೈಟ್‌ ಓಪನ್ ಆಗಲಿದ್ದು, ಕೊನೆಯ ದಿನದ ರಶ್ ತಪ್ಪಿಸಲು ಅಭ್ಯರ್ಥಿಗಳು ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಈ ನೇಮಕಾತಿ ಕುರಿತು ನಿಮಗೇನಾದರೂ ಗೊಂದಲಗಳಿದ್ದರೆ ಕೆಳಗೆ ಕಮೆಂಟ್ ಮಾಡಿ ಕೇಳಿ. ಹಾಗೆಯೇ, ನಿಮ್ಮ ಪರಿಚಯದ ನೆಟ್, ಕೆ-ಸೆಟ್ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಶಿಕ್ಷಕ ಮಿತ್ರರಿಗೆ ಹಾಗೂ ವಾಟ್ಸಾಪ್ ಗ್ರೂಪ್‌ಗಳಿಗೆ ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ!



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!