ಸಂಧ್ಯಾ ಸುರಕ್ಷಾ ಯೋಜನೆ 2026: ವೃದ್ಧರಿಗೆ ಸಿಗಲಿದೆ ಮಾಸಿಕ ₹1,200 ಪಿಂಚಣಿ! ಇಂದೇ ಅರ್ಜಿ ಸಲ್ಲಿಸಿ

 

ಕರ್ನಾಟಕ ಸಂಧ್ಯ ಸುರಕ್ಷಾ ಯೋಜನೆ 2026 : ₹1,200 ಮಾಸಿಕ ಪಿಂಚಣಿ

ವಯಸ್ಸಾದ ನಂತರ ಆರ್ಥಿಕ ಭದ್ರತೆ ಇಲ್ವಾ? ಮಕ್ಕಳ ಮೇಲೆ ಅವಲಂಬನೆ ಬೇಡ ಅಂದ್ರೆ ಕರ್ನಾಟಕ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಹಾಕಿ. 60 ವರ್ಷ ಮೇಲ್ಪಟ್ಟ ಬಡ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹1,200 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತೆ.

ಕರ್ನಾಟಕ ಸರ್ಕಾರವು ರಾಜ್ಯದ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಉಪಯುಕ್ತ ಯೋಜನೆ ಎಂದರೆ "ಸಂಧ್ಯಾ ಸುರಕ್ಷಾ ಯೋಜನೆ" (Sandhya Suraksha Yojane). ಈ ಯೋಜನೆಯಡಿ ಅರ್ಹ ವೃದ್ಧರಿಗೆ ಸರ್ಕಾರದಿಂದ ಪ್ರತಿ ತಿಂಗಳು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಆರ್ಥಿಕ ನೆರವು ಸಿಗುತ್ತದೆ.

ಸಂಧ್ಯಾ ಸುರಕ್ಷಾ ಯೋಜನೆ 2026 : ಮುಖ್ಯ ಡೀಟೇಲ್ಸ್.

ಯೋಜನೆ ಹೆಸರು : ಮುಖ್ಯಮಂತ್ರಿ ಸಂಧ್ಯಾ ಸುರಕ್ಷಾ ಯೋಜನೆ

ಮಾಸಿಕ ಪಿಂಚಣಿ : ₹1,200 - 2023 ರಲ್ಲಿ ₹1000 ಇದ್ದದ್ದು ಈಗ 1,200 ಆಗಿದೆ

ವಯಸ್ಸು : 65 ವರ್ಷ ಮೇಲ್ಪಟ್ಟವರು. ಕೆಲವು ಮೂಲಗಳ ಪ್ರಕಾರ 60+

ಆದಾಯ ಮಿತಿ : ವಾರ್ಷಿಕ ₹20,000 ಕ್ಕಿಂತ ಕಡಿಮೆ 

ಹಣ ಜಮಾ : DBT ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ 

ಫಲಾನುಭವಿಗಳು : ₹44 ಲಕ್ಷ + ಹಿರಿಯ ನಾಗರಿಕರು, ವಿಧವೆಯರು,ವಿಕಲಚೇತನರು

IGNOAPS + ರಾಜ್ಯಪಾಲರು : ಕೇಂದ್ರ ಸರ್ಕಾರ 60-70 ವಯಸ್ಸಿಗೆ ₹300,80+ ಗೆ ₹500 ಕೊಡುತ್ತೆ. ಕರ್ನಾಟಕ ಸರ್ಕಾರ ಅದರ ಮೇಲೆ ಟಾಪ್ - ಅಫ್ ಮಾಡಿ ₹1,200 ಮಾಡಿದೆ.

1. ಯಾರು ಅರ್ಹರು ? 5 ಕಂಡಿಷನ್ ಚೆಕ್ ಮಾಡಿ 

1. ವಯಸ್ಸು : 65 ವರ್ಷ ಪೂರ್ಣವಾಗಿರಬೇಕು. 

2.  ನಿವಾಸ : ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.

3. ಆದಾಯ : ಕುಟುಂಬದ ವಾರ್ಷಿಕ ಆದಾಯ ₹20,000 ಕ್ಕಿಂತ ಕಡಿಮೆ.

4. ಬ್ಯಾಂಕ್ ಠೇವಣಿ : FD/ಸೇವಿಂಗ್ಸ್  ₹10,000 ಮೀರಾಬಾರದು

5. ಇತರೆ ಪಿಂಚಣಿ ಬೇಡ : ವೃದ್ಯಾಪ್ಯ, ವಿಧವ, ವಿಕಲಚೇತನ ಅಥವಾ ಬೇರೆ ಸರ್ಕಾರಿ ಪಿಂಚಣಿ ಪಡೆಯುತ್ತಿರಬಾರದು. 

ಟಾರ್ಗೆಟ್ ಗುಂಪು : ಸಣ್ಣ ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ನೇಕಾರರು, ಅಸಂಘಟಿತ ವಲಯದ ಕಾರ್ಮಿಕರು.

2. ಬೇಕಾಗುವ ದಾಖಲೆಗಳ ಲಿಸ್ಟ್ 

1. ಆಧಾರ್ ಕಾರ್ಡ್ 

2. ವಯಸ್ಸಿನ ದೃಢೀಕರಣ : ಜನನ ಪ್ರಮಾಣ ಪತ್ರ, ವೋಟರ್ ID,SSLC ಮಾರ್ಕ್ಸ್ ಕಾರ್ಡ್ 

3. ಆದಾಯ ಪ್ರಮಾಣಪತ್ರ  ಅಥವಾ BPL ರೇಷನ್ ಕಾರ್ಡ್ 

4. ಬ್ಯಾಂಕ್ ಪಾಸ್ ಬುಕ್ - ಆಧಾರ್ ಲಿಂಕ್ ಆಗಿರಬೇಕು. 

5. ನಿವಾಸಿ ದೃಢೀಕರಣ 

6. ಪಾಸ್ ಪೋರ್ಟ್ ಅಳತೆಯ ಫೋಟೋ

3. ಆನ್ ಲೈನ್ ಅರ್ಜಿ ಹಾಕುವುದು ಹೇಗೆ?

ಸ್ಟೆಪ್ 1 : Sevasindhu.karnataka.gov.in ಗೆ ಹೋಗಿ.

ಸ್ಟೆಪ್ 2 : "Sandhya Suraksha Yojana" ಸರ್ಚ್ ಮಾಡಿ.

ಸ್ಟೆಪ್ 3 : ಆಧಾರ್, ವಯಸ್ಸು, ಬ್ಯಾಂಕ್ ಡೀಟೇಲ್ಸ್ ಭರ್ತಿ ಮಾಡಿ. 

ಸ್ಟೆಪ್ 4 : ದಾಖಲೆ ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿ

ಆಫ್ ಲೈನ್  : ಹತ್ತಿರದ ಗ್ರಾಮ ಪಂಚಾಯಿತ, ನಾಡಕಛೇರಿ, BDO ಆಫೀಸ್ ನಲ್ಲಿ ಅರ್ಜಿ ಕೊಡಬಹುದು. 

ಅನುಮೋದನೆ ಸಮಯ : ಸಾಮಾನ್ಯವಾಗಿ 15 ರಿಂದ 30 ದಿನ. ಅನುಮೋದನೆ ನಂತರ ಪ್ರತಿ ತಿಂಗಳು DBT ಮೂಲಕ ಹಣ ಜಮಾ. 

4. ಪಿಂಚಣಿ ಜೊತೆ ಸಿಗೋ ಇತರೆ ಮೂರು ಲಾಭ

1. ವೈದ್ಯಕೀಯ ಸೌಲಭ್ಯ : NGO ಗಳ ಮೂಲಕ ಉಚಿತ ಆರೋಗ್ಯ ಸೇವೆ. 

2. KSRTS ಬಸ್ ರಿಯಾಯಿತಿ : ಹಿರಿಯಾ ನಾಗರಿಕರಿಗೆ ಬಸ್ ಪಾಸ್ ರಿಯಾಯಿತಿ.

3. ಡೇ ಕೇರ್ ಸೆಂಟರ್ : ವಯಸ್ಸಾದವರಿಗೆ ದಿನಪೂರ್ತಿ ಆರೈಕೆ ಕೇಂದ್ರ.

⚠️ ಮುಖ್ಯ : ತಪ್ಪಾದ ದಾಖಲೆ, ಆದಾಯ ಜಾಸ್ತಿ, ಈಗಾಗಲೇ ಪಿಂಚಣಿ ಇದ್ದರೆ ಅರ್ಜಿ ರಿಜೆಕ್ಟ್ ಆಗುತ್ತೆ. 

👉 ಹೊಸ ಅಪ್ಡೇಟ್ : 1 ಜುಲೈ 2024 ರಿಂದ ಡಿಜಿಟಲ್ PPO ಜಾರಿಗೆ ಬಂದಿದೆ. 

agopublic.kar.nic.in ನಲ್ಲಿ  ಪಿಂಚಣಿ ಆದೇಶ ಡೌನ್ಲೋಡ್ ಮಾಡಬಹುದು.

ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ಅರ್ಹರಾಗಿದ್ದರೆ ನಿಮ್ಮ ಪಿಂಚಣಿಯನ್ನು ಮಂಜೂರು ಮಾಡುತ್ತಾರೆ. ತದನಂತರ ಪ್ರತಿ ತಿಂಗಳು ₹1,200 ಹಣ ನಿಮ್ಮ ಖಾತೆಗೆ ಬರಲು ಆರಂಭವಾಗುತ್ತದೆ.

ಗಮನಿಸಿ: ನಿಮ್ಮ ಮನೆಯಲ್ಲಿ ಅಥವಾ ನೆರೆಹೊರೆಯಲ್ಲಿ ಯಾರಾದರೂ ಅರ್ಹ ವೃದ್ಧರಿದ್ದರೆ ಇಂದೇ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವರಿಗೆ ಸಹಾಯ ಮಾಡಿ. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ, ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ್ ಮಾಡಿ!


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ISRO Teacher Recruitment 2026: ಇಸ್ರೋ ಸಂಸ್ಥೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ಜರಿ ನೇಮಕಾತಿ; ಜುಲೈ 7 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ! ಅರ್ಹತೆ ಹಾಗೂ ಸಂಪೂರ್ಣ ವಿವರಗಳು ಇಲ್ಲಿವೆ.

Belagavi DCC Bank Recruitment 2026: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ! 104 ದ್ವಿತೀಯ ದರ್ಜೆ ಸಹಾಯಕ, ಸಿಪಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ; ₹1,15,150 ವರೆಗೆ ಸಂಬಳ!

Karnataka Teacher Recruitment 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! 15,000 ಸರ್ಕಾರಿ ಶಾಲೆ ಶಿಕ್ಷಕರ ನೇರ ನೇಮಕಾತಿಗೆ ಅಧಿಕೃತ ಆದೇಶ ಪ್ರಕಟ; ಇಲ್ಲಿದೆ ಕಂಪ್ಲೀಟ್ ವಿವರ!